Select Your Language

Notifications

webdunia
webdunia
webdunia
webdunia

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ದೃಢ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಕಟ್ಟೆಚ್ಚರ

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ದೃಢ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಕಟ್ಟೆಚ್ಚರ

Sampriya

ಮಂಗಳೂರು , ಸೋಮವಾರ, 22 ಏಪ್ರಿಲ್ 2024 (16:39 IST)
ಮಂಗಳೂರು: ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ದೃಢಪಟ್ಟ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಮಂಗಳೂರಿನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಎರಡು ಹಕ್ಕಿ ಜ್ವರ ದೃಢಪಟ್ಟಿದೆ.

ಇದೀಗ ಕೋಳಿ ಉತ್ಪನ್ನಗಳನ್ನು ಕೇರಳಕ್ಕೆ ತಲುಪಿಸಿದ ನಂತರ ದಕ್ಷಿಣ ಕನ್ನಡಕ್ಕೆ ಹಿಂದಿರುಗುವ ವಾಹನಗಳನ್ನು ಸ್ಯಾನಿಸೈಟಸ್ ಮಾಡಕಲಾಗುತ್ತಿದೆಸ.  ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಜನ ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.  

ಹಕ್ಕಿ ಜ್ವರ ಎಂದರೇನು: ಹೆಚ್​​5ಎನ್​​1 ವೈರಸ್​​ನಿಂದ ಹರಡುವ ಸೋಂಕನ್ನು ಹಕ್ಕಿ ಜ್ವರ ಎಂದು ಕರೆಯಲಾಗುತ್ತದೆ. ಈ ವೈರಸ್ ಹೆಚ್ಚಿನ ಮರಣ ಪ್ರಮಾಣದೊಂದಿಗೆ ತೀವ್ರವಾದ ಜ್ವರವಿರುತ್ತದೆ. ಇನ್ನೂ ಮನುಷ್ಯರಲ್ಲಿ ಈ ರೋಗದ ಹರಡುವಿಕೆ ತುಂಬಾನೇ ವಿರಳ. ಈ ವೈರಸ್ ಮಾನವರಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹರಡಿದ ಬಗ್ಗೆ ವರದಿಯಾಗಿಲ್ಲ. ಆದರೂ ಈ ಬಗ್ಗೆ ನಿರ್ಲಕ್ಷ್ಯ ತೋರುವಂತಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರ ಸುಳ್ಳು ಕೇಳಿ ನನಗೇ ನಾಚಿಕೆಯಾಯ್ತು: ಸಿಎಂ ಸಿದ್ದರಾಮಯ್ಯ