Publish Date: Sat, 07 Apr 2018 (11:14 IST)
Updated Date: Sat, 07 Apr 2018 (11:16 IST)
ಚಿತ್ರದುರ್ಗ: ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಾಂಧಲೆ ನಡೆಸಿ ಎಂದು ಹೇಳಿಕೆ ನೀಡಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಇದೇ ತಿಂಗಳು 15 ರಂದು ನಡೆಯಲಿರುವ ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸಿ. ನಂತರ ಅಲ್ಲಿದ್ದ ಕುರ್ಚಿ, ಸಾಮಾನುಗಳನ್ನು ಎತ್ತಿ ಬಿಸಾಕಿ. ಬಳಿಕ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಭರವಸೆ ಎಲ್ಲಿ ಹೋಯಿತು ಎಂದು ಕೇಳಿ ಎಂದು ಮೇವಾನಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು.
ಇದರ ವಿರುದ್ಧ ದೂರು ನೀಡಿರುವ ಬಿಜೆಪಿ, ಮೇವಾನಿಗೆ ಹಿಂಸೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿದೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ದಲಿತರ 20 ವೋಟು ಕೂಡಾ ಬಿಜೆಪಿಗೆ ಬೀಳಬಾರದು ಎಂದು ಅವರು ಯುವಕರಿಗೆ ಕರೆ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Sat, 07 Apr 2018 (11:14 IST)
Updated Date: Sat, 07 Apr 2018 (11:16 IST)