Publish Date: Sat, 07 Apr 2018 (10:49 IST)
Updated Date: Sat, 07 Apr 2018 (11:12 IST)
ನವದೆಹಲಿ: ಗೂಬೆ, ನರಿ, ನಾಯಿ ಮುಂತಾದ ಪ್ರಾಣಿಗಳೆಲ್ಲಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಡಲು ಒಂದಾಗಿವೆ ಎಂಬ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ಕಾಂಗ್ರೆಸ್ ನ್ನು ಕೆರಳಿಸಿದೆ.
ವಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಬಿಜೆಪಿ ಅಧ್ಯಕ್ಷನ ಮೇಲೆ ಕಾಂಗ್ರೆಸ್ ಕಿಡಿ ಕಾರಿದೆ. ಅಮಿತ್ ಶಾ ಪ್ರಯೋಗಿಸದ ಭಾಷೆ ಗಮನಿಸಿದರೆ ಅವರು ಯುದ್ಧ ಶುರುವಾಗುವ ಮೊದಲೇ ಸೋತ ಪಕ್ಷದ ನಾಯಕ ಎಂದು ಅನಿಸುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಾಜ್ ದೀಪ್ ಸುರ್ಜೇವಾಲ್ ಕಿಡಿ ಕಾರಿದ್ದಾರೆ.
ಬಿಜೆಪಿ ಪಕ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್ ಶಾ ಇಂತಹದ್ದೊಂದು ಹೇಳಿಕೆ ನೀಡಿದ್ದರು. 11 ಜನರಿಂದ ಆರಂಭವಾದ ಪಕ್ಷ ಇಂದು 11 ಕೋಟಿ ಕಾರ್ಯಕರ್ತರನ್ನು ಹೊಂದಿದೆ ಎಂದು ಹೊಗಳಿಕೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.