Publish Date: Fri, 06 Apr 2018 (18:34 IST)
Updated Date: Fri, 06 Apr 2018 (18:37 IST)
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಈಗ ತಾರಕಕ್ಕೆ ಏರಿದ್ದು, ಸ್ವಾಮೀಜಿಯೊಬ್ಬರು ಇದಕ್ಕೆ ಬೆಂಬಲ ನೀಡದ ಇತರೆ ಸ್ವಾಮಿಗಳ ವಿರುದ್ಧ ಕೀಳು ಮಟ್ಟದ ಭಾಷೆ ಬಳಸಿ ಜರಿದಿದ್ದಾರೆ.
ಕಳೆದ ರಾತ್ರಿ ಗದಗನ ನಗರದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಮಂಗಲೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತಿದ್ದ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ, ಲಿಂಗಾಯತ ಧರ್ಮ ಪ್ರತ್ಯೇಕತೆ ವಿರೋಧಕ್ಕೆ ಅನ್ಯ ಸ್ವಾಮೀಜಿಗಳು, ಜೋಗಪ್ಪ, ಜೋಗವ್ವ ಇದ್ದಂತೆ… ಗಂಡು ಅಲ್ಲಾ ಹೆಣ್ಣು ಅಲ್ಲಾ ಔಟ್ ಆಗಿದ್ದಾರೆ.
ಹಾಗೇ ಬಸವಣ್ಣನವರ ತತ್ವ ಪಾಲಿಸದವರು ಕೂಡ ಜೋಗಪ್ಪನಂತೆ ಔಟ್ ಆಗಿದ್ದಾರೆ. ಅಂತಾ ಭಾಷಾ ಪ್ರಹಾರ ನಡೆಸಿದ್ದಾರೆ. ಒಮ್ಮೆ ನೋಡಿದರೆ, ಸಿಎಂ ಸಿದ್ದರಾಮಯ್ಯನ ವಿರುದ್ಧ ಪ್ರಚಾರ ಮಾಡುತ್ತೀವಿ ಅಂತಾರೆ, ಇನ್ನೊಮ್ಮೆ ನಾವು ಚುನಾವಣೆಯ ಪ್ರಚಾರ ಮಾಡುವುದಿಲ್ಲಾ ನಮ್ಗೆ ಎಲ್ಲಾ ಪಕ್ಷದವರು ಬೇಕು ಅಂತಾರೆ ಈ ಮೂಲಕ ಮತ್ತೆ ಬಹುಬೇಗ ಪ್ಲೇಟ್ಚೆಂಜ್ ಮಾಡ್ತಾರೆ. ಇವರು ಮಾತಿಗೆ ತಳ ಬುಡ ಏನೂ ಇಲ್ಲ. ಇಂತವರು ಯಲ್ಲಮ್ಮನ ಗುಡ್ಡದಲ್ಲಿ ಜೋಗಪ್ಪಗಳು ಔಟ್ ಆದಂತೆ ಅಂತಾ ವ್ಯಂಗ್ಯವಾಡಿದ್ದಾರೆ.
‘ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ’
ಇತ್ತೀಚೆಗೆ ಬಾಗಲಕೋಟೆಯ ಶಿವಯೋಗಿ ಮಂದಿರದಲ್ಲಿ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವೀರಶೈವ ಮತ್ತು ಲಿಂಗಾಯತವನ್ನ ಬೇರ್ಪಡಿಸುವುದಿಲ್ಲ ಎಂದಿದ್ರು. ಶಾ ಅವರ ಈ ಹೇಳಿಕೆ ವಿರುದ್ಧ ಕಿಡಿಕಾರಿದ ಡಾ. ಸಿದ್ಧಲಿಂಗ ಸ್ವಾಮೀಜಿ, ವೀರಶೈವ ಮತ್ತು ಲಿಂಗಾಯತವನ್ನ ಪ್ರತ್ಯೇಕಿಸುವುದಿಲ್ಲ ಅಂದ್ರೆ, ಬಿಜೆಪಿ ಎಲ್ಲೂ ಅಧಿಕಾರಕ್ಕೆ ಬರುವುದಿಲ್ಲ ಅಂತಾ ರಾಜ್ಯ ರಾಜಕಾರಣದ ಭವಿಷ್ಯ ನುಡಿದ್ರು.