Select Your Language

Notifications

webdunia
webdunia
webdunia
Sunday, 6 April 2025
webdunia

ಭೀಕರ ಅಪಘಾತ : ಚೆಲ್ಲಾಪಿಲ್ಲಿಯಾಗಿ ಬಿದ್ದ ಶವಗಳು..!

ಅಪಘಾತ
ತುಮಕೂರು , ಶನಿವಾರ, 19 ಮಾರ್ಚ್ 2022 (12:31 IST)
ತುಮಕೂರು : ಪಾವಗಡದ ತಿರುವಿನಲ್ಲಿ ನಡೆದ ಖಾಸಗಿ ಬಸ್ನ ಭೀಕರ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದು, ರಸ್ತೆಯಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
 
ಇಂದು ಬೆಳಗ್ಗೆ ಖಾಸಗಿ ಬಸ್ ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಹೋಗುತ್ತಿತ್ತು. ಬಸ್ನ ಟಾಪ್ನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಕುಳಿತಿದ್ದರು.

ಆದರೆ ಬಸ್ ಓವರ್ ಲೋಡ್ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಕೆರೆ ಏರಿ ಮೇಲೆ ಬಸ್ ಉರುಳಿದೆ. ಇದರಿಂದಾಗಿ 8 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.

ವೈ.ಎನ್ ಹೋಸಕೋಟೆಯ ಕಲ್ಯಾಣ (18), ಬೆಸ್ತರಹಳ್ಳಿ ನಿವಾಸದ ಶಹನವಾಜ್ (20), ಸೂಲನಾಯಕನಹಳ್ಳಿಯ ಅಮೂಲ್ಯ (17), ಅಜಿತ್ (28) ಮೃತರು. ಮೃತರೆಲ್ಲರೂ ತಿರುಮಣಿ, ಪಳವಳ್ಳಿ, ವೈ ಎನ್ ಹೊಸಕೋಟೆ ಮೂಲದವರಾಗಿದ್ದಾರೆ. ಮೃತದೇಹ ಎಲ್ಲೆಂದರಲ್ಲಿ ಬಿದ್ದಿದೆ.

ಬಸ್ನಲ್ಲಿದ್ದ ಕೆಲವು ಪ್ರಯಾಣಿಕರು ಬಸ್ ಅಡಿಗೆ ಬಿದ್ದಿದ್ದರೇ, ಇನ್ನೂ ಕೆಲವರು ಕೆರೆಗೆ ಬಿದ್ದಿದ್ದಾರೆ. ಕೆರೆಯಲ್ಲಿ ಬಿದ್ದ ಪ್ರಯಾಣಿಕರು ಮೇಲೆ ಬರುತ್ತಿದ್ದಾರೆ. ಈಗಾಗಲೇ ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾತನಾಡಿ, 8 ಜನರು ಸಾವನ್ನಪ್ಪಿದ್ದಾರೆ. 4 ಮೃತ ದೇಹಗಳ ರವಾನೆ ಆಗಿದೆ. ಸಾಕಷ್ಟು ಜನರಿಗೆ ಗಂಭೀರ ಗಾಯ ಆಗಿದೆ. ಅತಿಯಾದ ಸ್ಪೀಡ್ನಿಂದ ಘಟನೆ ಆಗಿದೆ. ಸ್ಥಳೀಯವಾಗಿ ಎಲ್ಲಾ ತುರ್ತು ಆರೋಗ್ಯ ಸೇವೆ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನವೀನ್ ಮೃತದೇಹ ದಾನಮಾಡಲು ಕುಟುಂಬಸ್ಥರು