Select Your Language

Notifications

webdunia
webdunia
webdunia
webdunia

ಬಿಯರ್ ಕುಡಿಯುತ್ತಾ ಬೈಕ್ ಚಾಲನೆ ಮಾಡಿದ ಮೂವರು ವೈದ್ಯರಿಗೆ ಬಿಗ್‌ಶಾಕ್‌

Bengaluru Drunk and Drive Case
ಬೆಂಗಳೂರು: ಮದ್ಯಪಾನ ಸೇವಿಸುತ್ತಾ ನಗರದ ಬೀದಿಗಳಲ್ಲಿ ಅಜಾರೂಕತೆಯಿಂದ ಬೈಕ್ ಚಾಲನೆ ಮಾಡುತ್ತಿರುವ ವೀಡಿಯೊ ವೈರಲ್ ಬೆನ್ನಲ್ಲೇ ಯುವತಿ ಸೇರಿದಂತೆ ಮೂವರು ವೈದ್ಯರನ್ನು ಅರೆಸ್ಟ್ ಮಾಡಲಾಗಿದೆ. 

ಮದ್ಯಪಾನ ಸೇವಿಸುತ್ತಾ ಅಜಾರೂಕತೆಯಿಂದ ಬೈಕ್ ಓಡಿಸುತ್ತಿರುವುದನ್ನು ಹಿಂದಿನಲ್ಲಿದ್ದ ಸವಾರರು ವಿಡಿಯೋ ಮಾಡಿದ್ದಾರೆ. 

ವೈರಲ್ ವಿಡಿಯೋವನ್ನು ಗಮನಿಸಿದ ಪೊಲೀಸರು, ಬೇಜವಾಬ್ದಾರಿ ಚಾಲನೆ ಮತ್ತು ಸಂಚಾರ ನಿಯಮಗಳ ಉಲ್ಲಂಘನೆ ಎಂದು ಆರೋಪಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದ್ದಾರೆ. 

ವಿಡಿಯೋ ಕ್ಲಿಪ್‌ನಲ್ಲಿ ಬೈಕ್ ನಲ್ಲಿ ಮೂವರು ಸವಾರಿ ಮಾಡುತ್ತಿದ್ದು ಹಿಂಬದಿ ಸವಾರರಲ್ಲಿ ಒಬ್ಬ ಬಿಯರ್ ಕುಡಿಯುತ್ತಿರುವುದನ್ನು ಕಾಣಬಹುದು. ಮೂವರು ತಡರಾತ್ರಿ ಜನನಿಬಿಡ ರಸ್ತೆಯಲ್ಲಿ ವೇಗವಾಗಿ ಚಾಲನೆ ಮಾಡುತ್ತಾ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರು.

ಇನ್ನೂ ಬಂಧಿತರೆಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಸದ್ಯ ಅವರೆನ್ನೆಲ್ಲಾ ಬಂಧಿಸಲಾಯಿತು. 

Share this Story:

Follow Webdunia kannada

ಮುಂದಿನ ಸುದ್ದಿ

ಪಶ್ಚಿಮ ಏಷ್ಯಾ ಸಂಘರ್ಷ: ಟ್ರಂಪ್ ಜತೆ ಮಹತ್ವದ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಮಾತುಕತೆ