Webdunia - Bharat's app for daily news and videos

Install App

Big Boss Kannada: ಚೈತ್ರಾ ಕುಂದಾಪುರ ಹ್ಯಾಟ್ರಿಕ್‌ ಕಳಪೆ: ಮತ್ತೆ ಜೈಲಿಗೆ ಫೈರ್‌ ಬ್ರ್ಯಾಂಡ್‌

Sampriya
ಶುಕ್ರವಾರ, 20 ಡಿಸೆಂಬರ್ 2024 (15:31 IST)
ಬೆಂಗಳೂರು:  ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯ ಆಟ ಇದೀಗ 90ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಮಧ್ಯೆ ಫೈರ್‌ ಬ್ರ್ಯಾಂಡ್ ಚೈತ್ರಾ ಕುಂದಾಪುರ ಮೂರನೇ ಬಾರಿ ಜೈಲು ಸೇರಿದ್ದಾರೆ.

ದೊಡ್ಮನೆಯಲ್ಲಿ ಎಂದಿನಂತೆ ಉತ್ತಮ ಮತ್ತು ಕಳಪೆ ಚಟುವಟಿಕೆಗಳು ನಡೆದಿವೆ. ಈಗಾಗಲೇ ಎರಡು ಬಾರಿ ಬಿಗ್ ಬಾಸ್ ಮನೆಯ ಜೈಲು ಸೇರಿದ್ದ ಚೈತ್ರಾ ಕುಂದಾಪುರ ಮತ್ತೆ ಕಂಬಿ ಹಿಂದೆ ಹೋಗಿದ್ದಾರೆ.

ಬಹುತೇಕ ಸ್ಪರ್ಧಿಗಳು ಕಳಪೆಗೆ ಚೈತ್ರಾ ಕುಂದಾಪುರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಹೀಗಾಗಿ ಚೈತ್ರಾ ಕುಂದಾಪುರ ಮತ್ತೆ ಜೈಲು ಸೇರಿದ್ದಾರೆ. ಇನ್ನು ಕಳಪೆ ನೀಡುವ ವೇಳೆ ಎಂದಿನಂತೆ ಮಾತಿನ ಸಮರಗಳು ನಡೆದಿವೆ. ವಿಶೇಷವಾಗಿ ಚೈತ್ರಾ ಕುಂದಾಪುರಗೆ ಹನುಮಂತು ಟಾಂಗ್ ನೀಡಿದ್ದಾರೆ.

ಟಾಸ್ಕ್‌ವೊಂದರಲ್ಲಿ ಚೈತ್ರಾ ಸರಿಯಾಗಿ ಉಸ್ತುವಾರಿ ಮಾಡದೇ ಬೇಕಂತಲೇ ಫೌಲ್ ಕೊಟ್ಟರೂ ಎಂಬ ಕಾರಣಕ್ಕೆ ಮೋಕ್ಷಿತಾ, ಧನರಾಜ್ ಸೇರಿದಂತೆ ಅನೇಕರು ಕಳಪೆ ಪಟ್ಟ ನೀಡಿದರು. ಬಳಿಕ ಕಳಪೆ ಪ್ರದರ್ಶನ ಎಂದ ಹನುಮಂತ ನಡುವೆ ವಾಕ್ಸಮರ ನಡೆದಿದೆ.

ಕಳಪೆ ಕೊಡಲು ನಾನು ಇಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನೀನು ನನ್ನ ದೊಡ್ಡಪ್ಪನ ಮಗಳು, ಅತ್ತೆ ಮಗಳು ಅಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ. ಇನ್ನೂ ಮುಂದಿನ ವಾರಕ್ಕೆ ಯಾರು ನಾಯಕರಾಗುತ್ತಾರೆ ಅನ್ನೋದು ಕೂಡ ರಿವೀಲ್ ಆಗಿದೆ. ಐಶ್ವರ್ಯಾಗೆ ಠಕ್ಕರ್ ಕೊಟ್ಟು ಭವ್ಯಾ ಬಿಗ್ ಬಾಸ್ ಮನೆಗೆ ಕ್ಯಾಪ್ಟನ್ ಆಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments