Select Your Language

Notifications

webdunia
webdunia
webdunia
webdunia

ಭಟ್ಕಳ: ಅಲೆಗಳ ಅಬ್ಬರಕ್ಕೆ ಮಗುಚಿದ ನಾಡದೋಣಿ, ನಾಲ್ವರು ಸಾವು

ಭಟ್ಕಳ ಅಳ್ವೆಕೋಡಿ ಬೀಚ್

Sampriya

ಕಾರವಾರ , ಬುಧವಾರ, 30 ಜುಲೈ 2025 (19:04 IST)
Photo Credit X
ಕಾರವಾರ(ಉತ್ತರ ಕನ್ನಡ): ಭಟ್ಕಳ ತಾಲೂಕಿನ ಅಳ್ವೇಕೋಡಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮಹಾಸತಿ ಎಂಬ ಗಿಲ್​ನೆಟ್ ನಾಡದೋಣಿ ಅಲೆಗಳ ಅಬ್ಬರಕ್ಕೆ ಮಗುಚಿ ನಾಲ್ವರು ಮೀನುಗಾರರು ಸಾವನ್ನಪ್ಪಿರುವ ಘಟನೆ ನಡೆದಿದೆ. 

ಮನೋಹರ ಎಂಬವರಿಗೆ ಸೇರಿದ ದೋಣಿಯಲ್ಲಿ ಒಟ್ಟು ಆರು ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದರು. 

ಸಮುದ್ರದಲ್ಲಿನ ಭಾರಿ ಅಲೆಗಳಿಗೆ ಸಿಲುಕಿದ ದೋಣಿ ಪಲ್ಟಿಯಾಗಿದ್ದು, ನಾಲ್ವರೂ ನೀರು ಪಾಲಾಗಿದ್ದವರು, ಸಾವನ್ನಪ್ಪಿದ್ದಾರೆ. ಈ ವೇಳೆ ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

ದೋಣಿ ಮಗುಚಿದ ಕೂಡಲೇ ಸ್ಥಳೀಯ ಮೀನುಗಾರರು ರಕ್ಷಣಾ ಕಾರ್ಯಾಚರಣೆ ನಡೆಸಿ ಮನೋಹರ ಮೊಗೇರ ಮತ್ತು ರಾಮಾ ಖಾರ್ವಿ ಅವರನ್ನು ರಕ್ಷಿಸಿದ್ದಾರೆ. ಆದರೆ, ರಾಮಕೃಷ್ಣ ಮೊಗೇರ, ಸತೀಶ ಮೊಗೇರ, ಗಣೇಶ ಮೊಗೇರ ಮತ್ತು ನಿಶ್ಚಿತ್ ಮೊಗೇರ ಎಂಬ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದರು.

ಪಲ್ಟಿಯಾದ ದೋಣಿ ಅಳ್ವೇಕೋಡಿ ಬ್ರೇಕ್ ವಾಟರ್ ಬಳಿ ಪತ್ತೆಯಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಸಾ-ಇಸ್ರೋ ನಿಸಾರ್ ಉಪಗ್ರಹ: ನಭಕ್ಕೆ ಚಿಮ್ಮಿದ ನಿಸಾರ್ ಮಾಡಲಿದೆ ಈ ಅಧ್ಯಯನ