Publish Date: Mon, 11 Sep 2017 (17:01 IST)
Updated Date: Mon, 11 Sep 2017 (17:21 IST)
ಮಂಗಳೂರು ಜೈಲಿನಲ್ಲಿ ಮಾರಾಮಾರಿ ನಡೆದಿದೆ. ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳಾದ ಸವನೀತ್ ಶೆಟ್ಟಿ, ಜ್ಯೋತಿಷಿ ನಿರಂಜನ್ ಶೆಟ್ಟಿ ಮೇಲೆ ಬಜಿಲಕೇರಿ ಧನರಾಜ್ ತಂಡದಿಂದ ಹಲ್ಲೆ ನಡೆದಿದೆ.
ಗಾಯಗೊಂಡಿರುವ ನವನೀತ್ ಶೆಟ್ಟಿ ಮತ್ತು ನಿರಂಜನ್ ಭಟ್ ಅವರನ್ನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಹಲ್ಲೆಗೆ ಕಾರಣ ಇನ್ನೂ ಸಹ ಕಾರಣ ತಿಳಿದು ಬಂದಿಲ್ಲ. ಬಜಿಲಕೇರಿ ಧನರಾಜ್ 307 ಕೇಸ್`ನಲ್ಲಿ ಜೈಲು ಸೇರಿದ್ದ.
ಇನ್ನೂ, ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಇಡೀ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿತ್ತು. ಹೆಂಡತಿ ಮತ್ತು ಮಗನೇ ಜ್ಯೋತಿಷಿಯೊಬ್ಬನ ಜೊತೆ ಸೇರಿಕೊಂಡು ಭಾಸ್ಕರ್ ಶೆಟ್ಟಿಯನ್ನ ಕೊಂದಿದ್ದರು. ಬಳಿಕ ಶವವನ್ನ ಹೋಮ ಕುಂಡದಲ್ಲಿ ಸುಟ್ಟು ಹಾಕಲಾಗಿತ್ತು. ಜೈಲಿನಲ್ಲಿದ್ದರೂ ಇವರ ಐಶಾರಾಮಿ ಜೀವನ ಮುಂದುವರೆದಿದ್ದು, ಇವರಿಗೆ ಸಹಕರಿಸಿದ ಮೂವರು ಪೊಲೀಸರನ್ನ ಅಮಾನತು ಮಾಡಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ