Publish Date: Mon, 11 Sep 2017 (14:46 IST)
Updated Date: Mon, 11 Sep 2017 (14:49 IST)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಶೀಘ್ರದಲ್ಲೇ ಸಿಎಂ ಅಕ್ರಮದ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ಕುಟುಂಬಸ್ಥರು ತಪ್ಪು ಮಾಡಿರುವುದು ಸತ್ಯ. ನೂರಕ್ಕೆ ನೂರಾ ಒಂದರಷ್ಟು ಸಿಎಂ ಅಕ್ರಮ ಕುರಿತು ದಾಖಲೆಯಿದೆ. ಸಿಎಂ ಮಾತ್ರವಲ್ಲದೆ 3-4 ಸಚಿವರಿಗೆ ಸಂಬಂಧಪಟ್ಟ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು 4-5 ದಿನಗಳಲ್ಲಿ ದಾಖಲೆ ಕಲೆ ಹಾಕುತ್ತೇವೆ. ಅಧಿಕೃತ ದಾಖಲೆಗಳಿಗಾಗಿ ಕಾಯುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯಗೆ ಪಿತ್ತ ನೆತ್ತಿಗೇರಿ ಮಾತನಾಡುತ್ತಿದ್ದಾರೆ. ಸಿಎಂ ಅಕ್ರಮದ ಬಗ್ಗೆ ನೂರಕ್ಕೆ ನೂರರಷ್ಟು ದಾಖಲೆಗಳು ನನ್ನ ಬಳಿ ಇವೆ. ಈ ಕುರಿತು ಶೀಘ್ರದಲ್ಲೇ ವಿಶೇಷ ಸುದ್ದಿಗೋಷ್ಠಿ ಮಾಡಿ ಅಕ್ರಮಗಳ ಕುರಿತಾದ ಮಾಹಿತಿ ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.