Select Your Language

Notifications

webdunia
webdunia
webdunia
webdunia

ಗೋವಿಂದರಾಜನಗರ ಹಾಗೂ ವಿಜಯನಗರ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ

ಗೋವಿಂದರಾಜನಗರ ಹಾಗೂ ವಿಜಯನಗರ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ
bangalore , ಭಾನುವಾರ, 30 ಏಪ್ರಿಲ್ 2023 (19:08 IST)
ಗೋವಿಂದರಾಜನಗರ ಕ್ಷೇತ್ರದಲ್ಲಿ ಇಂದು ಕೆಪಿಸಿಸಿ ರಾಜ್ಯಧ್ಯಕ್ಷ ಡಿಕೆಶಿ ಭರ್ಜರಿ ರೋಡ್ ಶೋ ನಡೆಸಿದ್ರು. ಇದೇ ವೇಳೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅತ್ಯಂತ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ, ಮೋದಿಯವರ ಜೊತೆಗೆ ಈಗ ಬರೀ ಲಂಚಕ್ಕೊಬ್ಬ ಮಂಚಕ್ಕೊಬ್ಬ ಇರೋರು ಮಾತ್ರ, ಸವದಿ ಮೇಲೆ ಭ್ರಷ್ಟಾಚಾರ ಆರೋಪ ಇತ್ತಾ? ಶೆಟ್ಟರ್ ಮೇಲೆ ಆರೋಪ ಇತ್ತಾ?ಅಂತ ಪ್ರಶ್ನೆ ಮಾಡಿದ್ರು. ಆರೋಪ ಇಲ್ಲದಿರೋರೆಲ್ಲ ನಮ್ಮ ಜೊತೆಗೆ ಇದ್ದಾರೆ. ಆರೋಪ ಇರುವವರು ಭ್ರಷ್ಟರು ಎಲ್ಲರೂ ಅವರ ಜೊತೆಗೆ ಇದ್ದಾರೆ. ಮೋದಿ ಏನೂ ಇಲ್ಲಿ ಆಡಳಿತ ಮಾಡೋದು ಬೇಕಾಗಿಲ್ಲ, ಅತ್ಯಂತ ನೀಚ ಭ್ರಷ್ಟ ಸರ್ಕಾರ ಇಲ್ಲಿದೆ. ಭ್ರಷ್ಟಾಚಾರ ಆರೋಪ ಇರುವವರನ್ನೆಲ್ಲ ಜೊತೆಗೆ ಇಟ್ಟುಕೊಂಡು ರ್ಯಾಲಿ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ರೋಡ್ ಶೋ ವೇಳೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರಿಯಕೃಷ್ಣ ಹಾಗೂ ಕೃಷ್ಣಪ್ಪನವರು ತಮ್ಮ ಕ್ಷೇತ್ರದ ಪ್ರಚಾರದಲ್ಲಿ ಭಾಗಿಯಾಗಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ರಾಜ್ಯಕ್ಕೆ ಬರಲಿ ಸಂತೋಷ - ಡಿಕೆಶಿವಕುಮಾರ್