Select Your Language

Notifications

webdunia
webdunia
webdunia
webdunia

ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವರು ಎಚ್ಚರ!

ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವರು ಎಚ್ಚರ!
ರಾಯಚೂರು , ಗುರುವಾರ, 30 ಜೂನ್ 2022 (13:45 IST)
ರಾಯಚೂರು : ಈಗ ಎಲ್ಲರ ಕೈಯಲ್ಲಿಯೂ ಮೊಬೈಲ್ ಗಳು ಆಗಿವೆ. ನಿತ್ಯವೂ ನೂರಾರು ಹೊಸ ಹೊಸ ಆ್ಯಪ್ ಗಳು ಬರುತ್ತಿವೆ.

ಮೆಸೇಜ್ ಮಾಡಿ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಎಂಬ ಹತ್ತಾರು ಸಂದೇಶಗಳು ಬರುತ್ತವೆ. ಕೆಲ ದುಷ್ಟ ಅನಾಮಿಕರು  ಹಣದಾಸೆ ತೋರಿಸಿ ಮೋಸ ಮಾಡುವುದೇ ದಂಧೆ ಮಾಡಿಕೊಂಡಿದ್ದಾರೆ.

ನೀವೂ ಬಂದಿರುವ ಮೆಸೇಜ್ ನೋಡಿ ಯಾವುದ್ಯಾವುದೋ ಆ್ಯಪ್ ಡೌನ್ಲೋಡ್ ಮಾಡಿಕೊಂಡ್ರೆ, ಲಕ್ಷ ಲಕ್ಷ ಹಣದ ಜೊತೆಗೆ ಮಾನವೂ ಹೋಗೋದು ಗ್ಯಾರೆಂಟಿ ಆಗಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನ ಬ್ಲಾಕ್ ಮಾಡುತ್ತಿದ್ದಾರೆ ಎಂಬುವುದು ನಾವು ದಿನಾ ಕೇಳ್ತಾನೇ ಇರ್ತೀವಿ. ಫೇಸ್ಬುಕ್ ಹಾಗೂ ವಾಟ್ಸಾಪ್ ಮೂಲಕ ಪರಿಚಯನೇ ಇಲ್ಲದವ್ರು ವಿಡಿಯೋ ಕಾಲ್ ಮಾಡಿ, ಆಮೇಲೆ ಹಣಕ್ಕೆ ಡಿಮ್ಯಾಂಡ್ ಮಾಡೋ ದಂಧೆಯೂ ಜೋರಾಗಿ ನಡೆದಿದೆ.

ಇಂತಹದೇ ಜಾಲವೊಂದಕ್ಕೆ ಸಿಲುಕಿದ ರಾಯಚೂರು ಜಿಲ್ಲೆಯ ದೇವದುರ್ಗದ ಯುವಕ ಮೈನುದ್ದೀನ್ ಈಗ ಪರದಾಟ ನಡೆಸಿದ್ದಾನೆ. ಚೈನೀಸ್ ಆ್ಯಪ್ ಗಳ ಮೂಲಕ ಲೋನ್ ಆಮಿಷ ತೋರಿಸಿ ಲಕ್ಷಾಂತರ ಹಣ ವಸೂಲಿ ಮಾಡಿರುವ ಭಯಾನಕ ಘಟನೆವೊಂದು ತಡವಾಗಿ  ಬೆಳಕಿಗೆ ಬಂದಿದೆ.

ಯುವಕ ಮೈನುದ್ದೀನ್ ಗೆ ಆರಂಭದಲ್ಲಿ ಕೇಂದ್ರ ಸರ್ಕಾರದ ಮುದ್ರಾ ಯೋಜನೆಯ ಸ್ಕೀಮ್ ನಲ್ಲಿ ನಿಮಗೆ ಲೋನ್ ಬಂದಿದೆ ಎಂದು ಕರೆ ಬರುತ್ತೆ. ಕರೆ ಮಾಡಿ ಕನ್ಫರ್ಮ್ ಮಾಡಿಕೊಳ್ಳೋದಕ್ಕೆ ಅಂತಾ ಕರೆ ಮಾಡಿದ್ದ ಐನಾತಿಗಳೇ ಒಂದು ಸಾವಿರ ಆತನ ಅಕೌಂಟ್ ಗೆ ಹಾಕ್ತಾರೆ. ಮೈನುದ್ದೀನ್ ಖಾತೆಗೆ ಒಂದು ಸಾವಿರ ರೂಪಾಯಿ ಬಂದಿದೆ ಎಂದು ಖುಷಿ ಆಗಿದ್ದ, ಆದ್ರೆ ಖದೀಮರು ಮಾರನೇ ದಿನದಿಂದಲೇ ಬ್ಲಾಕ್ ಮೇಲೆ ಮಾಡೋದಕ್ಕೆ ಶುರು ಮಾಡಿದರು.

ನಿನಗೆ 1 ಸಾವಿರ ರೂಪಾಯಿ ಹಾಕಿದ್ದೇನೆ. ನೀನು ಒಂದು ಸಾವಿರ ರೂಪಾಯಿಗೆ 40% ಬಡ್ಡಿ ಕಟ್ಟುವಂತೆ ತಕರಾರು ಮಾಡ್ತಾರೆ. ಆಗ ಯುವಕ ಬಡ್ಡಿ ಕಟ್ಟಲು ಹಿಂದೇಟು ಹಾಕುತ್ತಾನೆ. ಆಗ  ಖದೀಮರು ಬ್ಲಾಕ್ ಮೇಲ್ ಮಾಡೋದಕ್ಕೆ ಮುಂದಾಗಿ ಆತನ ಮೊಬೈಲ್ ನ ಗ್ಯಾಲರಿಯಲ್ಲಿ ಇರುವ ಫೋಟೋಗಳಿಗೆ ಅಶ್ಲೀಲ ಪೋಟೋ ಎಡಿಟ್ ಮಾಡಿ ಭಯಬೀಳಿಸುವ ರೀತಿಯಲ್ಲಿ ಮೆಸೇಜ್ ಹಾಕಲು ಶುರು ಮಾಡುತ್ತಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆ ಮೇಲೆ ಅತ್ಯಾಚಾರ! ಅಪರಾಧಿಗೆ ಏನು ಶಿಕ್ಷೆ ಗೊತ್ತ?