Daily Horoscope
✕

ವಿದ್ಯುತ್‌ ಪ್ರವಹಿಸಿ ಬೆಸ್ಕಾಂ ಲೈನ್‌ ಮನ್‌ ಸಾವು

Webdunia
ಸೋಮವಾರ, 23 ಜನವರಿ 2023 (20:05 IST)
ಆಕಸ್ಮಿಕವಾಗಿ ವಿದ್ಯುತ್‌ ಪ್ರವಹಿಸಿ ಕರ್ತವ್ಯನಿರತ ಬೆಸ್ಕಾಂ ಲೈನ್‌ ಮನ್‌ ಮೃತಪಟ್ಟಿರುವ ಘಟನೆ ಮಾಗಡಿ ರಸ್ತೆ ಪೋಲಿಸ್‌ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ. 
ದುರ್ಘಟನೆಯಲ್ಲಿ ಬೆಸ್ಕಾಂ ಲೈನ್‌ ಮನ್‌ ಗೌತಮ್‌ (26) ಮೃತಪಟ್ಟಿದ್ದು, ಸೋಮವಾರ ಬೆಳಗ್ಗೆ ಸುಮಾರು 9.10ಕ್ಕೆ ವಿದ್ಯುತ್‌ ವ್ಯತ್ಯಯ ದೂರ ಬಂದ ಹಿನ್ನೆಲೆಯಲ್ಲಿ ಮಾಗಡಿ ರಸ್ತೆಯ ಗೋಪಾಲಪುರದ ಪೋಲಿಸ್‌ ಚೌಕಿ ಬಳಿ ಇರುವ ಎಪ್‌ -29 ಫೀಡರ್‌ ದುರಸ್ತಿಗೆ ಹೋಗಿದ್ದಾಗ ಘಟನೆ ಸಂಭವಿಸಿದೆ. 
ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕೇವಲ ಒಂದು ಲೈನ್‌ ನ ವಿದ್ಯುತ್‌ ಸಂಪರ್ಕ ಕಡಿತ ಮಾಡಿದ್ದು, ಇನ್ನೊಂದು ಲೈನ್‌ ನ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿರಲಿಲ್ಲ. ಅರ್ಥಿಂಗ್‌ ಮಾಡಿಕೊಳ್ಳದೆ ಕಾರ್ಯನಿರ್ವಹಿಸಿದ್ದರಿಂದ ಟ್ರಾನ್ಸ್‌ ಫಾರ್ಮರ್‌ ವಿದ್ಯುತ್‌ ಪ್ರವಹಿಸಿ  ಗೌತಮ ಮೃತಪಟ್ಟಿದ್ದಾರೆಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಗೌತಮ ಅವರನ್ನು ಸ್ಥಳೀಯರು ತಕ್ಷಣವೇ ರಾಜಾಜಿನಗರದ ಸುಗುಣ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಗೆ ಸಾಗಿಸುವ ವೇಳೆ ಮೃತ ಪಟ್ಟಿರುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ. 
ರಾತ್ರಿ ಪಾಳಿಯಲ್ಲಿದ್ದ ಗೌತಮ ಅವರು ವಿದ್ಯುತ್‌ ವ್ಯತ್ಯಯ ದೂರ ಬಂದ ತಕ್ಷಣ ಕರ್ತವ್ಯಕ್ಕೆ ತೆರಳಿದ್ದಾರೆ. ಸ್ಥಳಕ್ಕೆ  ಬೆಸ್ಕಾಂನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಗಡಿ ರಸ್ತೆ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತ್ತೆ ಕಮಲ ಹಿಡಿಯಲಿದ್ದಾರಾ ಕೆ.ಎಸ್. ಈಶ್ವರಪ್ಪ: ಸುಳಿವು ನೀಡಿದ ಮಾಜಿ ಸಚಿವ

ವಿದ್ಯುತ್ ತಂತಿ ಜೋಡಿಸುವಾಗ ಭೀಕರ ದುರಂತ, ನರಳಾಡಿ ಪ್ರಾಣ ಬಿಟ್ಟ ಯುವಕ: ಶಾಕಿಂಗ್ Video

ಸುಳ್ಯದಲ್ಲಿ ತೆರೆದ ಚರಂಡಿಗೆ ಬಿದ್ದ ಮಗು, ಬದುಕಿದ್ದೇ ಪವಾಡ: Video

ಬದರೀನಾಥದಲ್ಲಿ ಪವಾಡ: ಶ್ರೀ ರಾಮ್ ಜಪ ಕೇಳಿ ಮಹಿಳೆಯ ಮಡಿಲಿಗೆ ಬಂದು ಮೈಮರೆತ ಕೋತಿ Video

ನಾರಾಯಣನ ರೂಪದಲ್ಲಿ ನಂದಿಯೇ ಬಂತು..ಪವಾಡ ಮಾಡಿದ ಗೂಳಿ: ನಂಬಲಸಾಧ್ಯ ಘಟನೆಯಿದು Video

ಮುಂದಿನ ಸುದ್ದಿ
Show comments