ಗಣರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಲಾಲ್‌ಬಾಗ್ ಉದ್ಯಾನಕ್ಕೆ '213ನೇ ಫಲಪುಷ್ಪ ಪ್ರದರ್ಶನ' ಕಣ್ತುಂಬಿಕೊಳ್ಳಲು ಬರುವವರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ ಪೇಪರ್ ಟಿಕೆಟ್ ಪರಿಚಯಿಸಿದೆ. ಜನವರಿ 26ರಂದು ಗುರುವಾರ ಒಂದು ದಿನ ಲಾಲ್ ಬಾಗ್ ಉದ್ಯಾನಕ್ಕೆ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಅಲ್ಲಿನ ಜನದಟ್ಟಣೆ ಕಡಿಮೆ ಮಾಡಲು ಹಾಗೂ ಉದ್ಯಾನಕ್ಕೆ ಫಲಪುಷ್ಪ ಪ್ರದರ್ಶನ ನೋಡಲು ಬರುವವರಿಗೆ ಸಹಾಯಾರ್ಥವಾಗಿ ಬಿಎಂಆರ್‌ಸಿಎಲ್ ಪೇಪರ್ ಟಿಕೆಟ್ ನೀಡಲಿದೆ.