Bengaluru stampede: ನಂಗೆ ಮಗ ಬೇಕು.. ಮಗನ ಸಮಾಧಿ ಮೇಲೆ ಬಿದ್ದು ಗೋಳಾಡಿದ ಭೂಮಿಕ್ ತಂದೆ

Krishnaveni K
ಶನಿವಾರ, 7 ಜೂನ್ 2025 (13:59 IST)
Photo Credit: Instagram
ಹಾಸನ: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತಕ್ಕೆ ಬಲಿಯಾದ ಭೂಮಿಕ್ ತಂದೆ ಗೋಳಾಟ ನೋಡಿದರೆ ಎಂತಹವರ ಕರುಳೂ ಚುರುಕ್ ಎನ್ನುತ್ತದೆ. ನನ್ನ ಮಗ ಇಲ್ಲೇ ಮಲಗಿದ್ದಾನೆ, ಅವನನ್ನು ಬಿಟ್ಟು ಬರಲ್ಲ ಎಂದು ತಂದೆ ಗೋಳಾಡುತ್ತಿದ್ದಾರೆ.

ಆರ್ ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದ್ದ 11 ಮಂದಿ ಪೈಕಿ ಬೇಲೂರಿನ ಭೂಮಿಕ್ ಕೂಡಾ ಒಬ್ಬ. ಮಗನನ್ನು ತಂದೆ ಲಕ್ಷ್ಮಣ್ ತಮ್ಮ ಮನೆಯ ಸಮೀಪದಲ್ಲೇ ಇರುವ ಜಾಗದಲ್ಲಿ ಮಣ್ಣು ಮಾಡಿದ್ದಾರೆ.

ಇದೀಗ ಮಗನ ಸಮಾಧಿ ಮೇಲೆ ಮಲಗಿ ಲಕ್ಷ್ಮಣ್ ಗೋಳಾಡಿದ್ದಾರೆ. ನನ್ನ ಮಗ ನನಗೆ ಬೇಕು, ಅವನಿಗೆಂದೇ ಮಾಡಿದ ಜಾಗ ಇದು. ಅವನು ಇಲ್ಲಿ ಮಲಗಿದ್ದಾನೆ. ಅವನ ಜೊತೆಗೇ ನಾನೂ ಮಲಗುತ್ತೇನೆ, ಈ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರಬಾರದು ಎಂದು ಭೂಮಿಕ್ ಸಮಾಧಿ ಮೇಲೆ ಮಲಗಿ ಗೋಳಾಡಿದ್ದಾರೆ.

ಮಗನ ಸಮಾಧಿಯನ್ನು ತಬ್ಬಿ ಮಲಗಿ ಕಣ್ಣೀರು ಹಾಕುತ್ತಿದ್ದಾರೆ. ನನಗೆ ನನ್ನ ಮಗ ಬೇಕು ಎಂದು ಅವರು ಗೋಳಾಡುತ್ತಿರುವುದು ನೋಡಿದರೆ ಎಂಥಹವರಿಗೂ ಕಣ್ಣೀರು ಬರುತ್ತದೆ. ಅಭಿಮಾನವೆಂದು ಹೋಗಿ ಜೀವ ಕಳೆದುಕೊಂಡವರ ಕುಟುಂಬದವರ ಇಂದಿನ ಪರಿಸ್ಥಿತಿಯಿದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಚ್ ಪ್ರಶ್ನೆಯೆತ್ತಿದ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಪ್ರತಿಕ್ರಿಯೆ

ಸರ್ದಾರ್ ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಧನ ಕದಿಯುತ್ತಿದ್ದ ಇಬ್ಬರ ಬಂಧನ

ಭಾರತಕ್ಕೆ ಬಂದಿಳಿದ ಪುಟಿನ್,ಅಪ್ಪುಗೆಯೊಂದಿಗೆ ಸ್ವಾಗತಿಸಿದ ನರೇಂದ್ರ ಮೋದಿ

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಪತಿ ಸ್ವರಾಜ್ ಕೌಶಲ್ ನಿಧನ, ಪುತ್ರಿ ಭಾವನಾತ್ಮಕ ಪೋಸ್ಟ್‌

ನಿಮ್ಮ ಸಮಯ ಸರಿ ಇದ್ದರೆ ವಾಚ್ ವಿಷಯ ಬರುತ್ತಿರಲಿಲ್ಲ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಮುಂದಿನ ಸುದ್ದಿ
Show comments