Daily Horoscope

Select Your Language

Notifications

webdunia
webdunia
webdunia
webdunia

Bengaluru Rains: ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ

Bengaluru rains
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಮಳೆ ಅಬ್ಬರಿಸುತ್ತಿದೆ. ಇಂದು ಸಂಜೆ ರಾಜ್ಯ ರಾಜಧಾನಿ ಬೆಂಗಳೂರಿನ ಬಹುತೇಕ ಕಡೆ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ.

ಮುಂದಿನ ಎರಡು-ಮೂರು ದಿನಗಳಿಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಸೂಚಿಸಿದ್ದವು. ಅದರಂತೆ ಇಂದು ಸಂಜೆಯಿಂದ ಬೆಂಗಳೂರಿನಲ್ಲಿ ಭಾರೀ ಗುಡುಗು, ಬಿರುಗಾಳಿ ಸಹಿತ ಮಳೆಯಾಗುತ್ತಿದೆ.

ನಗರದ ಕೆಲವು ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆಯಾದ ವರದಿಯಾಗಿದೆ. ಮೆಜೆಸ್ಟಿಕ್, ಕೋರಮಂಗಲ, ಶಾಂತಿನಗರ, ಕೆಆರ್ ಪುರಂ, ಹೆಬ್ಬಾಳ ಸೇರಿದಂತೆ ಬಹುತೇಕ ಕಡೆ ಬಿರುಗಾಳಿ ಸಹಿತ ಎಡೆಬಿಡದೇ ಮಳೆ ಸುರಿಯುತ್ತಿದೆ.

ಕಳೆದ ಎರಡು-ಮೂರು ವಾರಗಳಿಂದ ಬೆಂಗಳೂರು ಬಿರು ಬಿಸಿಲಿನಿಂದ ತತ್ತರಿಸಿತ್ತು. ಇದರ ನಡುವೆ ಇಂದು ಸುರಿದ ಮಳೆ ಕೊಂಚ ತಂಪು ನೀಡಿದೆ. ಹಾಗಿದ್ದರೂ ಕಚೇರಿಯಿಂದ ಮನೆಗೆ ತೆರಳುವವರು ಕೊಂಚ ಕಿರಿ ಕಿರಿ ಅನುಭವಿಸುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್‍ವೈ ಅಭಿಮಾನೋತ್ಸವಕ್ಕೆ 10 ಲಕ್ಷ ಜನರ ನಿರೀಕ್ಷೆ: ಬಿ.ವೈ.ವಿಜಯೇಂದ್ರ