Daily Horoscope
✕

ಅಂತರ ಕಾಯ್ದುಕೊಂಡ ಪ್ರೇಮಿಗೆ ಚಾಕುವಿನಿಂದ ಇರಿದ ಯುವತಿ, ಬಳಿಕ ಮಾಡಿದ್ದೇನು ಗೊತ್ತಾ

Sampriya
ಶುಕ್ರವಾರ, 27 ಫೆಬ್ರವರಿ 2026 (14:27 IST)
ಬಿಡದಿ (ರಾಮನಗರ): ಬ್ರೇಕಪ್ ಬಳಿಕ ದೂರವಾಗಿದ್ದ ಮಾಜಿ ಪ್ರೇಮಿಗೆ ಯುವತಿಯೊಬ್ಬಳು ಚಾಕುವಿನಿಂದ ಇರುದಯ ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಪಟ್ಟಣದ ಸಿಲ್ಕ್ ಫಾರ್ಮ್ ಕ್ವಾಟ್ರಸ್ ಬಳಿ ಗುರುವಾರ ರಾತ್ರಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ವೇಣುಗೋಪಾಲ್ (27) ಎಂದು ಗುರುತಿಸಲಾಗಿದೆ.  ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿರುವ 30 ವರ್ಷದ ಸುಧಾ ಘಟನೆ ಬಳಿಕ ಬಿಡದಿ ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ.

ಪಟ್ಟಣದ ಜಿಮ್‌ನಲ್ಲಿ ಟ್ರೈನರ್ ಆಗಿರುವ ವೇಣುಗೋಪಾಲ್ ಮತ್ತು ಸುಧಾ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಕೆಲ ದಿನಗಳಿಂದ ಸುಧಾ ಜೊತೆ ವೇಣುಗೋಪಾಲ್ ಅಂತರ ಕಾಯ್ದುಕೊಂಡಿದ್ದರು. ಸುಧಾಳ ಮೊಬೈಲ್ ಕರೆಯನ್ನು ವೇಣುಗೋಪಾಲ್ ಅವರು ಸ್ವೀಕಾರ ಮಾಡುತ್ತಿರಲಿಲ್ಲ. 

ಇದರಿಂದ ಬೇಸತ್ತ ಸುಧಾ, ತನಗೆ ಮೋಸ ಮಾಡುತ್ತಿರುವ ಯುವಕನ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾಳೆ. ಮಾತನಾಡಬೇಕಿದೆ ಎಂದು ಗುರುವಾರ ರಾತ್ರಿ ಯುವಕನನ್ನು ತನ್ನ ಮನೆ ಬಳಿಗೆ ಕರೆಯಿಸಿಕೊಂಡು ಚಾಕುವಿನಿಂದ ಹೊಟ್ಟೆ, ಎದೆ ಹಾಗೂ ಭುಜಕ್ಕೆ ಇರಿದಿದ್ದಾಳೆ. ನೋವಿನಿಂದ ಯುವಕ ಕೆಳಕ್ಕೆ ಬೀಳುತ್ತಿದ್ದಂತೆ ಯುವತಿ ಸ್ಥಳದಿಂದ ಕಾಲ್ಕಿತ್ತಿದ್ದಾಳೆ ಎಂದು ಪೊಲೀಸರು ಹೇಳಿದರು.

ಚಾಕು ಇರಿತ ತೀವ್ರತೆಗೆ ಯುವಕನ ಕರಳು ಹೊರಕ್ಕೆ ಬಂದಿದೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃತ್ಯದ ಬಳಿಕ ಯುವತಿ ಠಾಣೆಗೆ ಬಂದು ಶರಣಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿತೀಶ್ ಸೇತು ಉದ್ಘಾಟನೆ ಮಾಡಿ ಜನರತ್ತ ಗಮ್ಚಾ ಬೀಸಿದ ಪ್ರಧಾನಿ ಮೋದಿ Video

ಕಾಂಗ್ರೆಸ್ ಕಾರ್ಯಕರ್ತರಿಗೆ ಸರಕಾರಿ ಹಣ ಹಂಚುವ ಹೀನ ಕಾರ್ಯ: ಆರ್.ಅಶೋಕ್ ಟೀಕೆ

ವಿಚ್ಛೇದನದ ಹೊಸ್ತಿಲಲ್ಲಿ ಪ್ರೀತಿಯ ಗೆಲುವು: ಸಹಿ ಹಾಕುವ ಮುನ್ನ ಪತಿಯ ಕಡೆ ನೋಡಿ ಓಡಿದ ಯುವತಿ, ವೈರಲ್ ವಿಡಿಯೋ

ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಎಷ್ಟಿದೆ ಬಂಗಾರದ ಬೆಲೆ

ನಿಮ್ಮ ಮನೆ ನವೀಕರಣಕ್ಕೆ ಕೋಟಿ ಖರ್ಚು ಮಾಡ್ತೀರಿ, ಆಶಾ ಕಾರ್ಯಕರ್ತೆಯರಿಗೆ ದುಡ್ಡಿಲ್ವಾ: ಸಿಎಂ ಡಿಕೆಶಿಗೆ ಬಿಜೆಪಿ ಟಾಂಗ್ video

ಮುಂದಿನ ಸುದ್ದಿ
Show comments