Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಡೆಂಗ್ಯೂ ಬಲು ದುಬಾರಿ: ನಿಮ್ಮ ಏರಿಯಾದಲ್ಲಿ ಪರೀಕ್ಷೆಗೆ ಎಷ್ಟು ಚಾರ್ಜ್ ಮಾಡ್ತಿದ್ದಾರೆ

Dengue

Krishnaveni K

ಬೆಂಗಳೂರು , ಬುಧವಾರ, 7 ಆಗಸ್ಟ್ 2024 (09:22 IST)
ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರ ಕಾಟ ಮಿತಿ ಮೀರಿದೆ. ಡೆಂಗ್ಯೂಗಿಂತ ಡೆಂಗ್ಯೂ ಪರೀಕ್ಷೆಯೇ ಜನರಿಗೆ ದುಬಾರಿಯಾಗುತ್ತಿದೆ.

ಇತ್ತೀಚೆಗೆ ರಾಜ್ಯ ಸರ್ಕಾರ ಡೆಂಗ್ಯೂ ಪರೀಕ್ಷೆಗೆ 250 ರೂ.ನಿಂದ 300 ರೂ. ಒಳಗೆ ಚಾರ್ಜ್ ಮಾಡಬೇಕು ಎಂದು ದರ ನಿಗದಿಪಡಿಸಿತ್ತು. ಆದರೆ ಸರ್ಕಾರದ ನಿಯಮಗಳನ್ನು ಖಾಸಗಿ ಲ್ಯಾಬ್ ಗಳು ಕ್ಯಾರೇ ಮಾಡಿಲ್ಲ. ತಮ್ಮದೇ ಫೀಸ್ ನಿಗದಿಪಡಿಸಿ ಕೆಲವು ಲ್ಯಾಬ್ ಗಳು ಅಕ್ಷರಶಃ ಜನರಿಂದ ಸುಲಿಗೆ ಮಾಡುತ್ತಿವೆ.

ಸರ್ಕಾರ ನಿಗದಿಪಡಿಸಿದ ದರಕ್ಕಿಂತ 3 ಪಟ್ಟು ಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ. ಹೆಚ್ಚಿನ ಖಾಸಗಿ ಲ್ಯಾಬ್ ಗಳನ್ನು ಸಂಪರ್ಕಿಸಿದಾಗ ಡೆಂಗ್ಯೂ ಪ್ರೊಫೈಲ್ ಟೆಸ್ಟ್ ಗೆ 1000 ಅಥವಾ 1250 ರೂ. ಶುಲ್ಕ ಕೇಳುತ್ತಿದ್ದಾರೆ. ಸರ್ಕಾರ ಇಷ್ಟು ದರ ನಿಗದಿಪಡಿಸಿದೆಯಲ್ಲ ಎಂದು ಕೇಳಿದರೆ ನಮ್ಮಲ್ಲಿ ಇಷ್ಟು ದರ, ಬೇರೆ ನಮಗೆ ಗೊತ್ತಿಲ್ಲ ಎಂಬ ಮಾಹಿತಿ ಬರುತ್ತಿದೆ.

ಸರ್ಕಾರ ಏನೇನಿಯಮ ಮಾಡಿದರೂ ಅದು ಈ ಖಾಸಗಿ ಲ್ಯಾಬ್ ಗಳಿಗೆ ಅನ್ವಯವೇ ಆಗುತ್ತಿಲ್ಲ. ಈ ಹಿಂದೆ ಕೊರೋನಾ ಸಂದರ್ಭದಲ್ಲೂ ಖಾಸಗಿ ಲ್ಯಾಬ್ ಗಳು, ಆಸ್ಪತ್ರೆಗಳು ಅಕ್ಷರಶಃ ಸುಲಿಗೆಗಿಳಿದಿದ್ದವು. ಸರ್ಕಾರ ಏನೇ ನಿಯಮ ಮಾಡಿದರೂ ಕ್ಯಾರೇ ಎಂದಿರಲಿಲ್ಲ. ಈಗ ಡೆಂಗ್ಯೂ ಪರೀಕ್ಷೆ ವಿಚಾರದಲ್ಲೂ ಸರ್ಕಾರ ಖಾಸಗಿ ಲ್ಯಾಬ್ ಗಳಿಗೆ ಅಂಕುಶ ಹಾಕಲು ಕಠಿಣ ಕ್ರಮ ಕೈಗೊಳ್ಳಲೇಬೇಕು. ಇಲ್ಲದೇ ಹೋದರೆ ಸಾಮಾನ್ಯ ಜನರಿಗೆ ಡೆಂಗ್ಯೂ ಟೆಸ್ಟ್ ತೀರಾ ಹೊರೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೇ ಆಸ್ಪತ್ರೆಗೆ ದಾಖಲಾದ ಬಿಜೆಪಿ ನಾಯಕ ಅಡ್ವಾಣಿ ಆರೋಗ್ಯ ಮಾಹಿತಿ ಇಲ್ಲಿದೆ