Select Your Language

Notifications

webdunia
webdunia
webdunia
webdunia

ಮಂಗಳೂರು, ಬೆಂಗಳೂರು ನಡುವೆ ರೈಲು ಪ್ರಯಾಣ ಆರಂಭಕ್ಕೆ ದಿನ ನಿಗದಿ: ವಿವರ ಇಲ್ಲಿದೆ

Shiradi Ghat

Krishnaveni K

ಬೆಂಗಳೂರು , ಸೋಮವಾರ, 5 ಆಗಸ್ಟ್ 2024 (10:32 IST)
ಬೆಂಗಳೂರು: ಮಂಗಳೂರು ಮತ್ತು ಬೆಂಗಳೂರು ನಡುವೆ ರೈಲು ಪ್ರಯಾಣ ಯಾವಾಗ ಆರಂಭವಾಗುತ್ತದೆ ಎಂದು ಕಾಯುತ್ತಿರುವ ಪ್ರಯಾಣಿಕರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಕರಾವಳಿಗೆ ಸಂಪರ್ಕ ಕಲ್ಪಿಸುವ ರೈಲು ಪ್ರಯಾಣ ಪುನರಾರಂಭವಾಗುತ್ತಿದೆ.

ಎಡಕುಮೇರಿ ಬಳಿ ಮಣ್ಣು ಕುಸಿದಿದ್ದರಿಂದ ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಚರಸುತ್ತಿದ್ದ ರೈಲು ರದ್ದಾಗಿತ್ತು. ಜುಲೈ 26 ರಿಂದ ಶಿರಾಡಿ ಘಾಟಿ ರಸ್ತೆಯಾಗಿ ರೈಲು ಸಂಚರಿಸುತ್ತಿರಲಿಲ್ಲ. ಇದರಿಂದ ಅನೇಕರಿಗೆ ತೊಂದರೆಯಾಗಿತ್ತು. ಇದೀಗ ರೈಲು ಮಾರ್ಗ ದುರಸ್ಥಿಯಾಗಿದ್ದು, ಪ್ರಯಾಣಕ್ಕೆ ಸಿದ್ಧತೆ ನಡೆದಿದೆ.

ನಿನ್ನೆಗೆ ದುರಸ್ಥಿ ಕಾರ್ಯ ಪೂರ್ಣವಾಗಿದೆ. ಇದೀಗ ಎರಡು ದಿನಗಳ ಕಾಲ ಗೂಡ್ಸ್ ರೈಲುಗಳನ್ನು ಓಡಿಸಲಾಗುತ್ತದೆ. ಇದಾದ ಬಳಿ ಪ್ಯಾಸೆಂಜರ್ ರೈಲು ನಾಳೆಯಿಂದ ಆರಂಭವಾಗಲಿದೆ. ಅಂದರೆ ಮಂಗಳವಾರದಿಂದ ಎಂದಿನಂತೆ ಪ್ಯಾಸೆಂಜರ್ ರೈಲು ಮಂಗಳೂರು ಮತ್ತು ಬೆಂಗಳೂರು ನಡುವೆ ಓಡಾಟ ಆರಂಭಿಸಲಿದೆ.

ಮಣ್ಣು ಕುಸಿದ ಜಾಗಕ್ಕೆ ಮರಳು ಚೀಲ, ಕಾಂಕ್ರೀಟ್ ಕಾಮಗಾರಿ ಹಾಕಿ ದುರಸ್ಥಿ ಮಾಡಲಾಗಿದೆ. ಸತತವಾಗಿ ಮಳೆ ಸುರಿದಿದ್ದರಿಂದ ಶಿರಾಡಿ ಘಾಟಿ ರಸ್ತೆಯಲ್ಲೂ ಭೂಕುಸಿತವಾಗಿ ವಾಹನ ಓಡಾಟಕ್ಕೆ ತೊಂದರೆಯಾಗಿತ್ತು. ಇದೀಗ ಆ ಸಮಸ್ಯೆಯೂ ನಿವಾರಣೆಯಾಗಿದ್ದು ಎಂದಿನಂತೆ ವಾಹನ ಸಂಚಾರ ಆರಂಭವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಜೆಡಿಎಸ್ ನವರು ತಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ವಿರುದ್ಧ ಪಿತೂರಿ ಮಾಡ್ತಿದ್ದಾರೆ