Select Your Language

Notifications

webdunia
webdunia
webdunia
webdunia

ಕರ್ನಾಟಕ ಮಳೆ ಇಫೆಕ್ಟ್: ತರಕಾರಿ, ಹಣ್ಣು ಬೆಲೆ ಕೇಳೋ ಹಾಗೆಯೇ ಇಲ್ಲ

Vegetable price

Krishnaveni K

ಬೆಂಗಳೂರು , ಮಂಗಳವಾರ, 6 ಆಗಸ್ಟ್ 2024 (09:37 IST)
ಬೆಂಗಳೂರು:  ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರಿಗೆ ಹೊರೆಯಾಗುತ್ತಿದೆ.

ಬೆಂಗಳೂರಿನಲ್ಲಿ ಮಳೆ ಶುರುವಾದಾಗಿನಿಂದ ತರಕಾರಿ ಬೆಲೆ ಗಗನಕ್ಕೇರುತ್ತಲೇ ಇದೆ. ಇದರ ನಡುವೆ ಕೆಲವು ದಿನ ತಕ್ಕಮಟ್ಟಿಗೆ ಇಳಿಕೆಯಾಗಿತ್ತು. ಆದರೆ ಕಳೆದ ಎರಡು ವಾರಗಳಿಂದ ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುತ್ತಿದೆ ನೆರೆಯ ವಾತಾವರಣವಿದೆ. ಇದರಿಂದಾಗಿ ರೈತರು ಬೆಳೆದ ಬೆಳೆಯೂ ನಷ್ಟವಾಗಿದೆ.

ಹೀಗಾಗಿ ಸಹಜವಾಗಿಯೇ ತರಕಾರಿ ಬೆಲೆ ಗಗನಕ್ಕೇರಿದೆ. ಕೇವಲ ತರಕಾರಿ ಮಾತ್ರವಲ್ಲ, ಹಣ್ಣುಗಳ ಬೆಲೆಯೂ ದುಪ್ಪಟ್ಟಾಗಿದೆ. ಇನ್ನೇನು ಹಬ್ಬಗಳ ಸೀಸನ್ ಆರಂಭವಾಗುತ್ತಿದ್ದು ಬೆಲೆ ಏರಿಕೆ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿನಿತ್ಯ ಬಳಕೆ ಮಾಡುವ ತರಕಾರಿ ಹಣ್ಣುಗಳ ಬೆಲೆ ಏರಿಕೆಯಾಗಿದೆ.

ಬೀನ್ಸ್, ಕ್ಯಾರಟ್, ನುಗ್ಗೆಕಾಯಿ, ಬದನೆ 100 ರ ಗಡಿ ದಾಟಿದೆ. ಬಟಾಣಿ, ಬೆಳ್ಳುಳ್ಳಿ ಅಂತೂ 300 ರ ಗಡಿ ದಾಟಿದೆ. ಈರುಳ್ಳಿ ಕೆಜಿಗೆ 60 ರೂ. ತಲುಪಿದೆ. ದಪ್ಪಮೆಣಸಿನಕಾಯಿ, ಹಾಗಲಕಾಯಿ, ಹೀರೇಕಾಯಿ 80 ರೂ. ದಾಟಿದೆ. ಕೊತ್ತಂಬರಿ ಸೊಪ್ಪು 70, ಪುದಿನಾ 90 ರ ಗಡಿ ಮುಟ್ಟಿದೆ. 

ಹಣ್ಣುಗಳ ಕತೆಯೂ ಇದೇ. ಸೇಬು,  ದ್ರಾಕ್ಷಿ 300 ರ ಗಡಿ ದಾಟಿದೆ. ಬಟರ್ ಫ್ರೂಟ್ ಸೀಸನ್ ಆಗಿದ್ದರೂ 250 ರೂ. ಇದೆ. ಕಿತ್ತಳೆ, ಸಪೋಟ 200, ಪೈನಾಪಲ್ 150 ರೂ.ಗಳಷ್ಟಿದೆ. ಮೂಸಂಬಿ 140, ಬಾಳೆ ಹಣ್ಣು 80, ಪಪ್ಪಾಯ 50 ರೂ.ಗಳಷ್ಟು ಬೆಲೆ ಬಾಳುತ್ತಿದೆ. ಹೀಗೇ ಆದರೆ ಹಬ್ಬ ಆಚರಿಸುವುದು ಹೇಗೆ ಎಂಬ ಚಿಂತೆ ಬೆಂಗಳೂರಿಗರದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಅಟಲ್ ಪೆನ್ಷನ್ ಯೋಜನೆಗೆ ಯಾರು ಅರ್ಹರು ಮತ್ತು ಅರ್ಜಿ ಸಲ್ಲಿಸುವುದು ಹೇಗೆ