ಬೆಂಗಳೂರು: ಎಲ್ಲಾ ವಸ್ತುಗಳ ಬೆಲೆ ಏರಿಕೆ ನಡುವೆ ಈಗ ಬೆಂಗಳೂರಿಗರಿಗೆ ಆಟೋ ದರ ಏರಿಕೆಯ ಶಾಕ್ ಸಿಗಲಿದೆ. ಸದ್ಯದಲ್ಲೇ ಆಟೋ ದರ ಏರಿಕೆಯಾಗುವುದು ಖಚಿತವಾಗಿದೆ.
ಕೆಲವು ದಿನಗಳ ಹಿಂದೆ ಬೆಂಗಳೂರು ನಗರ ಡಿಸಿ ಜೊತೆ ಆಟೋ ಚಾಲಕರ ಸಂಘದವರು ಸಭೆ ನಡೆಸಿ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಇಂಧನ ದರ ಏರಿಕೆಯಾಗಿರುವುದರಿಂದ ಆಟೋ ಚಾಲಕರು ನಷ್ಟದಲ್ಲಿದ್ದಾರೆ ಎಂಬುದು ಅವರ ಅಳಲು.
ಹೀಗಾಗಿ ಈಗ ದರ ಏರಿಕೆ ಖಚಿತವಾಗಿದೆ. ಅಧಿಕೃತ ಆದೇಶ ಹೊರಬೀಳುವುದಷ್ಟೇ ಬಾಕಿ ಎನ್ನಲಾಗಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಕನಿಷ್ಠ ದರ 30 ರೂ. ಇದ್ದರೆ ನಂತರ ಪ್ರತೀ ಕಿಲೋಮೀಟರ್ ಗೆ 15 ರೂ. ಗಳಷ್ಟಿದೆ.
ಇನ್ನೀಗ ಕನಿಷ್ಠ ದರ 35 ರೂ. ಮತ್ತು ನಂತರ ಪ್ರತೀ ಕಿ.ಮೀ.ಗೆ 18 ರೂ. ಹೆಚ್ಚಳವಾಗಲಿದೆ ಎಂದು ತಿಳಿದುಬಂದಿದೆ. ಮಾರ್ಚ್ ನಲ್ಲಿ ಆಟೋ ಚಾಲಕರ ಸಂಘದ ಸಭೆ ನಡೆದಿತ್ತು.