Select Your Language

Notifications

webdunia
webdunia
webdunia
webdunia

Karnataka Weather: ಬೆಂಗಳೂರಿನಲ್ಲಿ ಇನ್ನೆಷ್ಟು ದಿನ ಬಿಸಿಲಿನ ತಾಪವಿರಲಿದೆ

Karnataka Rain

Krishnaveni K

ಬೆಂಗಳೂರು , ಮಂಗಳವಾರ, 29 ಏಪ್ರಿಲ್ 2025 (08:34 IST)
ಬೆಂಗಳೂರು: ರಾಜ್ಯದ ಹಲವೆಡೆ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಈ ಬಾರಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಹೇಳಿಕೊಳ್ಳುವಂತಹ ಮಳೆಯಾಗುತ್ತಿಲ್ಲ. ಬೆಂಗಳೂರಿನಲ್ಲಿ ಇನ್ನೆಷ್ಟು ದಿನ ಬಿಸಿಲಿನ ತಾಪವಿರಲಿದೆ ನೋಡಿ.

ರಾಜ್ಯದಲ್ಲಿ ವಿಪರೀತ ಬಿಸಿಲು ಮತ್ತು ಮಳೆಯ ನಡುವೆ ಕಣ್ಣಾಮುಚ್ಚಾಲೆಯಾಗುತ್ತಿದೆ. ಉತ್ತರದ ಜಿಲ್ಲೆಗಳಲ್ಲಂತೂ ತಾಪಮಾನ 40 ಡಿಗ್ರಿ ಆಸುಪಾಸಿಗೆ ಬಂದು ನಿಂತಿದೆ. ಆದರೆ ದಕ್ಷಿಣದ ಭಾಗದಲ್ಲಿ ಈ ಬಾರಿ ಬೇಸಿಗೆ ಮಳೆಯಾಗುತ್ತಿದೆ.

ಆದರೆ ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು ಸೇರಿದಂತೆ ಮಧ್ಯದ ಜಿಲ್ಲೆಗಳಿಗೆ ಈ ಬಾರಿ ಮಳೆ ಅಪರೂಪವಾಗಿದ್ದು, ತಾಪಮಾನ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ಬೆಂಗಳೂರಿಗೆ ಮಳೆಯಾಗಿಲ್ಲ. ಬದಲಾಗಿ ತಾಪಮಾನ ಮತ್ತಷ್ಟು ಏರಿಕೆಯಾಗಿದೆ.


ಇನ್ನೂ ಈ ವಾರಂತ್ಯದವರೆಗೂ ಈ ವಾತಾವರಣ ಮುಂದುವರಿಯಲಿದೆ. ಸಂಜೆ ವೇಳೆ ಮೋಡವಿದ್ದರೂ ಮಳೆಯಾಗುತ್ತಿಲ್ಲ. ಆದರೆ ಈ ವಾರಂತ್ಯದಲ್ಲಿ ಬೆಂಗಳೂರಿಗೆ ಸಣ್ಣ ಮಟ್ಟಿಗೆ ಮಳೆಯಾಗಲಿದೆ ಎಂದು ಹವಾಮಾನ ವರದಿ ಹೇಳಿದೆ. ಈ ತಿಂಗಳ ಅಂತ್ಯದವರೆಗೂ ವಿಪರೀತ ಸೆಖೆಯ ವಾತಾವರಣ ಮುಂದುವರಿಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರಿಗಳು ನಿಮ್ಮ ಮನೆಯ ಜೀತದಾಳುಗಳಲ್ಲ: ಸಿದ್ದರಾಮಯ್ಯಗೆ ಆರ್‌ ಅಶೋಕ್ ಪ್ರಶ್ನೆ