Select Your Language

Notifications

webdunia
webdunia
webdunia
webdunia

ಗಂಡು ಮಗು ಹುಟ್ಟಿದಕ್ಕೆ ಪಾರ್ಟಿ ಕೇಳಿದ್ದಕ್ಕೆ ಸ್ನೇಹಿತನಾ ಪ್ರಾಣನೇ ಹೋಯಿತು

Belgavi Birthday Party Murder
ಬೆಳಗಾವಿ: ಗಂಡು ಮಗು ಹುಟ್ಟಿದಕ್ಕೆ ಪಾರ್ಟಿ ಕೇಳಿದ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ವರದಿಯಾಗಿದೆ.

ಇನ್ನೂ ಕೊಲೆಯಾದ ವ್ಯಕ್ತಿಯನ್ನು ಗ್ರಾಮದ ಹಣಮಂತಪ್ಪ ಯಮನಪ್ಪ ಇಟಗಿ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ವ್ಯಕ್ತಿಯನ್ನು ವಿಶ್ವನಾಥ ಪೂಜೇರಿ ಎಂದು ಗುರುತಿಸಲಾಗಿದೆ.  

ಇಬ್ಬರು ಮದ್ಯದ ಅಮಲಿನಲ್ಲಿ ಗ್ರಾಮದ ಕಟ್ಟೆಯಲ್ಲಿ ಕುಳಿತು ಹರಟೆಯಲ್ಲಿ ತೊಡಗಿದ್ದರು. ಆಗ ಗಂಡು ಮಗು ಹುಟ್ಟಿದಕ್ಕೆ ವಿಶ್ವನಾಥ್ ಬಳಿ ಹಣಮಂತಪ್ಪ ಪಾರ್ಟಿ ಕೇಳಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಯಾಗಿದೆ. ಜಗಳದ ಸಮಯದಲ್ಲಿ ವಿಶ್ವನಾಥನ ಕಣ್ಣಿಗೆ ರಭಸವಾಗಿ ಹಣಮಂತಪ್ಪನ ಬೆರಳು ತಾಗಿದೆ. 

ಈ ಕೋಪದಲ್ಲಿ ಕಲ್ಲಿನಿಂದ ಹಣಮಂತ ತಲೆಗೆ ಆರೋಪಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಹಣಮಂತಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೋಹರಂ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಈಗ ನೆತ್ತರು ಹರಿದಿದೆ. ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನೇಸರಗಿ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್‌ಎಸ್‌ಎಸ್‌ ವಿರುದ್ಧ ಬಾಯ್ಬಿಟ್ಟ ಪ್ರಿಯಾಂಕ್ ಖರ್ಗೆ, ಮೊಹಮ್ಮದ್ ನಲಪಾಡ್‌ಗೆ ಸಮನ್ಸ್‌