Select Your Language

Notifications

webdunia
webdunia
webdunia
webdunia

ಆನಂದ್ ಗುರೂಜಿ ಮನೆ ಮೇಲೆ ಬಿಯರ್ ಬಾಟಲಿ, ಮಾಂಸದ ತುಂಡುಗಳನ್ನ ಎಸೆದ ದುಷ್ಕರ್ಮಿಗಳು

ಆನಂದ್ ಗುರೂಜಿ ಮನೆ ಮೇಲೆ ಬಿಯರ್ ಬಾಟಲಿ, ಮಾಂಸದ ತುಂಡುಗಳನ್ನ ಎಸೆದ ದುಷ್ಕರ್ಮಿಗಳು
ಬೆಂಗಳೂರು , ಶನಿವಾರ, 16 ಸೆಪ್ಟಂಬರ್ 2017 (15:50 IST)
ಬೈಕ್`ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ಮನೆ ಮೇಲೆ ಮಾಂಸದ ತುಂಡು, ಬಿಯರ್ ಬಾಟಲಿ ಎಸೆದು ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ. ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬೈಕ್`ನಲ್ಲಿ ಬಂದ ದುಷ್ಕರ್ಮಿಗಳು ಮಾಮಸದ ತುಂಡು, ಬಿಯರ್ ಬಾಟಲಿ ಎಸೆದು ಪರಾರಿಯಾಗಿದ್ದಾರೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಆನಂದ್ ಗುರೂಜಿ ಗೋಹತ್ಯೆ ಬಗ್ಗೆ ಪ್ರವಚನ ನೀಡಿದ ವಿಚಾರವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಟಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ಧಾರೆ. ಕಿಟಕಿಗಳಿಗೆ ಬಿಯರ್ ಬಾಟಲು, ಮನೆ ಮುಂದೆ ಮಾಂಸದ ತುಂಡುಗಳನ್ನ ಎಸೆದಿದ್ದಾರೆ. ಈ ಹಿಂದೆ ವ್ಯಕ್ತಿಯೊಬ್ಬ ಹಣ ಕೊಡುವಂತೆ ಆನಂದ್ ಗೂರೂಜಿಯನ್ನ ಬ್ಲಾಕ್ ಮೇಲ್ ಮಾಡಿ ಸಿಕ್ಕಿಬಿದ್ದಿದ್ದನ್ನ ಇಲ್ಲಿ ಸ್ಮರಿಸಬಹುದು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರದ್ದು ಢೋಂಗಿ ಹೋರಾಟ: ಕೃಷ್ಣ ಭೈರೇಗೌಡ