Publish Date: Mon, 09 Nov 2020 (11:14 IST)
Updated Date: Wed, 11 Nov 2020 (13:27 IST)
ಬೆಂಗಳೂರು: ದೀಪಾವಳಿ ಈ ಬಾರಿ ಪಟಾಕಿ ಹೊಡೆದು ಸಂಭ‍್ರಮಿಸಲು ನೀವೇನಾದರೂ ತಯಾರಿ ನಡೆಸಿದ್ದೀರಾ? ಹಾಗಿದ್ದರೆ ನಿಮ್ಮ ಎಚ್ಚರಿಕೆಯಲ್ಲಿ ನೀವಿರುವುದು ಒಳ್ಳೆಯದು.
ದೀಪಾವಳಿ ಬಂತೆಂದರೆ ಗುಂಪು ಕಟ್ಟಿಕೊಂಡು, ಬೀದಿಗೆ ಬಂದು ಪಟಾಕಿ ಹೊಡೆಯುವುದರಿಂದ ಇದುವರೆಗೆ ಕಣ್ಣು, ಕೈಗೆ ಅಪಾಯ ತಂದುಕೊಳ್ಳುವುದಿತ್ತು. ಆದರೆ ಅದರ ಜತೆಗೆ ಈ ಬಾರಿ ಕೊರೋನಾ ಅಪಾಯವೂ ಸೇರಿಕೊಂಡಿದೆ. ಈ ರೀತಿ ಗುಂಪು ಗುಂಪಾಗಿ ಸೇರುವುದರಿಂದ ಕೊರೋನಾ ಹರಡುವ ಅಪಾಯವಿದೆ. ಹೀಗಾಗಿ ಸಂಭ್ರಮಾಚರಣೆ ನೆಪದಲ್ಲಿ ನಮ್ಮ ಸುರಕ್ಷತೆ ನಾವು ಮರೆಯದೇ ಇದ್ದರೆ ಒಳ್ಳೆಯದು. ಸರ್ಕಾರವೂ ಕೊರೋನಾ ದೃಷ್ಟಿಯಿಂದ ಪಟಾಕಿ ಸಿಡಿಸಲು ನಿಬಂಧನೆಗಳನ್ನು ಹೇರಿದೆ. ಹೀಗಾಗಿ ಈ ನಿಯಮಗಳನ್ನು ಪಾಲಿಸಿ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳೋಣ.