Publish Date: Sun, 08 Nov 2020 (12:51 IST)
Updated Date: Sun, 08 Nov 2020 (12:53 IST)
ಬೆಂಗಳೂರು : ದೀಪಾವಳಿ ಹಬ್ಬ ಆಚರಣೆಯ ಹಿನ್ನಲೆಯಲ್ಲಿ ಪಟಾಕಿ ಮಾರಾಟದ ಬಗ್ಗೆ ರಾಜ್ಯ ಸರ್ಕಾರ ಗೈಡ್ ಲೈನ್ ಬಿಡುಗಡೆ ಮಾಡಿದೆ.
ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. 9 ದಿನ ಮಾತ್ರ ಅಂಗಡಿ ತೆರೆಯಲು ಅವಕಾಶ, ಅಂದರೆ ನ.7ರಿಂದ ನ.16ರವರೆಗೆ ಮಾತ್ರ ಮಾರಾಟ ಮಾಡುವಂತೆ ಸೂಚನೆ.
ಹಾಗೇ ಹಸಿರು ಪಟಾಕಿ ಅಂಗಡಿಗಳು ಮಾತ್ರ ಓಪನ್ ಇರಬೇಕು. ಅದು ಅವರು ನಿಗದಿತ ಸ್ಥಳದಲ್ಲಿ ಹಾಗೂ ನಿಗದಿ ಪಡಿಸಿದ ದಿನಾಂಕದಲ್ಲಿ ಹಸಿರು ಪಟಾಕಿ ಮಾರಾಟ ಮಾಡುವಂತತೆ ಆದೇಶಿಸಲಾಗಿದೆ. ಅಲ್ಲದೇ ಲೈಸೆನ್ಸ್ ಇರುವವರಿಗೆ ಮಾತ್ರ ಅನುಮತಿ. ಬಯಲು ಪ್ರದೇಶದಲ್ಲಿ ಮಾರಾಟಕ್ಕೆ ಅವಕಾಶ ಇದೆ ಎಂಬುದಾಗಿ ತಿಳಿಸಿದೆ.