Publish Date: Mon, 04 Sep 2023 (18:44 IST)
Updated Date: Mon, 04 Sep 2023 (17:52 IST)
ಇಂದಿನಿಂದ 2023-24ನೇ ಸಾಲಿನ ಬಿಇ ಶೈಕ್ಷಣಿಕ ವರ್ಷ ಶುರುವಾಗಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಯ ಇಂಜಿನಿಯರಿಂಗ್ ಕಾಲೇಜುಗಳು ಆರಂಭಗೊಂಡಿದೆ. ಇಂದಿನಿಂದ ಸೆಪ್ಟೆಂಬರ್ 14ರ ವರೆಗೆ ಪುನಶ್ಚೇತನ ತರಗತಿಗಳು ನಡೆಯಲಿದ್ದು, ಸೆಪ್ಟೆಂಬರ್ 15ರಿಂದ ಅಧಿಕೃತವಾಗಿ ಮೊದಲ ಸೆಮಿಸ್ಟರ್ ನಡೆಯಲಿದೆ. ಇನ್ನು, ಜನವರಿ 6ರಂದು ಮೊದಲ ಸೆಮಿಸ್ಟರ್ ಬೋದನಾ ತರಗತಿ ಮುಕ್ತಾಯಗೊಂಡ ಬಳಿಕ ಜನವರಿ 8 ರಿಂದ 19ರವರೆಗೆ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ಜನವರಿ 22ರಿಂದ ಫೆಬ್ರವರಿ 17ರವರೆಗೆ ಲಿಖಿತ ಪರೀಕ್ಷೆಗಳು ನಡೆಯಲಿದ್ದು, ಫೆಬ್ರವರಿ 19ರಿಂದ ಎರಡನೇ ಸೆಮಿಸ್ಟರ್ ಆರಂಭಗೊಳ್ಳಲಿದೆ.
geetha
Publish Date: Mon, 04 Sep 2023 (18:44 IST)
Updated Date: Mon, 04 Sep 2023 (17:52 IST)