Publish Date: Mon, 04 Sep 2023 (18:25 IST)
Updated Date: Mon, 04 Sep 2023 (17:27 IST)
ಕೊಪ್ಪಳದಲ್ಲಿ ಭಾರಿ ಮಳೆ ಹಿನ್ನಲೆ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಒಂದೇ ದಿನ 15 ಸೆಂ.ಮೀ ಮಳೆಯಾಗಿದ್ದು, ಧಾರಾಕಾರ ಮಳೆಗೆ ಕೊಪ್ಪಳದ ಮಂದಿ ಕಂಗಲಾಗಿದ್ದಾರೆ.. ಇನ್ನು ಜಿಲ್ಲೆಯ ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಗೆ ಮನ್ನಾಪುರ -ಇಟಗಿ ರಸ್ತೆಯಲ್ಲಿ ಸಿಕ್ಕಿಕೊಂಡಿದ್ದ ಕಾರು ರಸ್ತೆ ಸಮೇತ ಕೊಚ್ಚಿ ಹೋಗಿದೆ.