Select Your Language

Notifications

webdunia
webdunia
webdunia
webdunia

ಕೇಂದ್ರ ಸಚಿವರ ಮನೆಯಲ್ಲಿ ಯುವಕನ ಶವ ಪತ್ತೆ

ಕೇಂದ್ರ ಸಚಿವರ ಮನೆಯಲ್ಲಿ ಯುವಕನ ಶವ ಪತ್ತೆ
ಲಕೋ , ಶನಿವಾರ, 2 ಸೆಪ್ಟಂಬರ್ 2023 (20:20 IST)
ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದರೊಬ್ಬರ ನಿವಾಸದಲ್ಲಿ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಲಕೋದಲ್ಲಿ ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ನಿವಾಸದಲ್ಲೇ ಈ ಘಟನೆ ನಡೆದಿದೆ. ಅಲ್ಲದೆ ಸ್ಥಳದಲ್ಲಿ ಸಚಿವರ ಪುತ್ರನ ಹೆಸರಿನಲ್ಲಿ ಪರವಾನಗಿ ಪಡೆದ ಪಿಸ್ತೂಲ್ ಕೂಡ ಪತ್ತೆಯಾಗಿರುವುದು ಭಾರಿ ಅನುಮಾನಕ್ಕೆ ಎಡೆಮಾಡಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಸಚಿವರ ನಿವಾಸವನ್ನು ಶೋಧ ನಡೆಸಿದ್ದು ಬಲಿಯಾದ ಯುವಕ ವಿಕಾಸ್ ಶ್ರೀವಾಸ್ತವ ಎನ್ನಲಾಗಿದೆ. ಈತ ಕೌಶಲ್ ಕಿಶೋರ್ ಅವರ ಮಗನ ಸ್ನೇಹಿತ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋನ್ ಆ್ಯಪ್ ಕಿರುಕುಳಕ್ಕೆ ಸ್ವರಾಜ್ ಆತ್ಮಹತ್ಯೆ