Publish Date: Mon, 25 Dec 2023 (14:44 IST)
Updated Date: Mon, 25 Dec 2023 (17:01 IST)
ಕಸ ಎತ್ತೋ ಬಿಬಿಎಂಪಿ ಸಿಬ್ಬಂದಿ ಮಹಿಳೆಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಮುರುಗೇಶ್ ಪಾಳ್ಯದಲ್ಲಿ ನಡೆದಿದೆ. ಕಸದ ಗಾಡಿಯಲ್ಲಿ ಬಂದು ಬಿಬಿಎಂಪಿ ಸಿಬ್ಬಂದಿ ಮನೆ ಗೇಟ್ ಮುಂದೆ ಕಸ ಹಾಕಿದ್ದಾರೆ.
ಗೇಟ್ ಮುಂದೆ ಕಸ ಹಾಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಮನೆ ಮುಂದೆ ತಾನೇ ಕಸ ಸುರಿದ ಬಿಬಿಎಂಪಿ ಸಿಬ್ಬಂದಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆ.. ಮಹಿಳೆ ಎವಿಡೆನ್ಸ್ ಸಮೇತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಎಕ್ಸ್ನಲ್ಲಿ ಟ್ವೀಟ್ ಮಾಡಿ ಮಹಿಳೆ ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಮಹಿಳೆಯ ಟ್ವೀಟ್ ಗಮನಿಸಿ ಬೆಂಗಳೂರು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.