ಬಿಬಿಎಂಪಿ ಗೋಲ್ ಮಾಲ್: ಸಿಎಂ ಗರಂ

Webdunia
ಬುಧವಾರ, 5 ಸೆಪ್ಟಂಬರ್ 2018 (19:14 IST)
ಹಳ್ಳಿ ಪ್ರದೇಶಗಳಲ್ಲಿಯೇ 20 ರೂ.ಗೆ ಏನೂ ಸಿಗಲ್ಲ. ಅಂಥದ್ದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇವಲ 20 ರೂ.ಗಳಿಗೆ ಕಟ್ಟಡ ಬಾಡಿಗೆ ನೀಡಿ ಆದೇಶ ಹೊರಡಿಸಿದೆ. ಇದರ ವಿರುದ್ಧ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ.

ಬಿಬಿಎಂಪಿ ಮತ್ತೊಂದು ಯಡವಟ್ಟು ಹಾಗೂ ಗೋಲ್ ಮಾಲ್ ಬಹಿರಂಗಗೊಂಡಿದೆ. ಪ್ರತಿ ಚದರ ಅಡಿಗೆ 20 ಸಾವಿರ ಬಾಡಿಗೆ ಇರುವ ಪ್ರದೇಶದಲ್ಲಿ ಕಾನೂನು ಮೀರಿ ಕೇವಲ 20 ರೂ.ಗೆ ಮಂಜೂರು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಪ್ರಕರಣ ಕುರಿತು ಗರಂ ಆಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ಗೋಲ್ ಮಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ದಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.

ಎಂಜಿ ರಸ್ತೆಯ ಬಹುಮಹಡಿ ಕಟ್ಟಡದಲ್ಲಿರುವ ಕ್ಯಾನೊಪಿ ಎಂಬ ಹೊಟೇಲ್ ಗೆ ಪಾಲಿಕೆಯಿಂದ ಗುತ್ತಿಗೆ ಕೊಡಲಾಗಿದೆ. ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿಯವರು ನಿರ್ಣಯ ಕೈಗೊಂಡು ಮೇಯರ್ ರಿಂದ ಅನುಮೋದನೆ ಪಡೆದು ಕ್ಯಾನೊಪಿ ಹೊಟೇಲ್ ಗೆ ಕಡಿಮೆ ದರದಲ್ಲಿ ಬಾಡಿಗೆ ಗುತ್ತಿಗೆ ನೀಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾವೆಲ್ಲ ಕಸ ಗುಡಿಸಕ್ಕೆ ಇದೀವಾ, ಯೂಸ್ ಲೆಸ್ ಫೆಲೋಸ್: ಡಿಕೆ ಡಿಕೆ ಎಂದು ಕೂಗಿದ ಕಾರ್ಯಕರ್ತರ ಮೇಲೆ ಸಿಟ್ಟಾದ ಮಲ್ಲಿಕಾರ್ಜುನ ಖರ್ಗೆ Video

ಆರ್‌ಎಸ್‌ಎಸ್‌ನವರಿಗೆ ಧೈರ್ಯವಿಲ್ಲ ಪುಕ್ಕಲರು: ಅಧಿಕಾರ ಸ್ವೀಕರಿಸುತ್ತಿದ್ದ ಹಾಗೇ ಗುಡುಗಿದ ಬಿಕೆ ಹರಿಪ್ರಸಾದ್‌

ನೀಟ್ ವಿದ್ಯಾರ್ಥಿಗಳಿಗೆ ತೊಂದರೆ ಆಗ್ಬಾರ್ದು ಎಂದು ಮೋದಿ ಏನ್ ಮಾಡಿದ್ರು ಗೊತ್ತಾ

ಅಡ್ಡಮತದ ವಿಚಾರಕ್ಕೆ ಧರ್ಮಸ್ಥಳವನ್ನು ಎಳೆಯುವುದು ಬೇಡ: ಎಸ್‌ ಸುರೇಶ್ ಕುಮಾರ್‌

NEET ಪರೀಕ್ಷೆಗೆ ಹಾಜರಾಗಬೇಕಾದ ವಿದ್ಯಾರ್ಥಿನಿ ಪರೀಕ್ಷೆಗೂ ಮುನ್ನಾ ಸಾವಿಗೆ ಶರಣು, ಡೆತ್‌ನೋಟ್‌ನಲ್ಲಿ ಏನಿದೆ ಗೊತ್ತಾ

ಮುಂದಿನ ಸುದ್ದಿ
Show comments