Select Your Language

Notifications

webdunia
webdunia
webdunia
webdunia

ರಾಷ್ಟ್ರೀಯ ಧರ್ಮ ಸಂಸದ್ ಸಡಗರ

ರಾಷ್ಟ್ರೀಯ ಧರ್ಮ ಸಂಸದ್ ಸಡಗರ
ಮಂಗಳೂರು , ಭಾನುವಾರ, 2 ಸೆಪ್ಟಂಬರ್ 2018 (18:31 IST)
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಬಳಿಯ ಕನ್ಯಾಡಿಯಲ್ಲಿ  ಎರಡು ದಿನಗಳ ಕಾಲ ರಾಷ್ಟ್ರೀಯ ಧರ್ಮ ಸಂಸದ್  ನಡೆಯಲಿದೆ. 2 ಸಾವಿರಕ್ಕೂ ಹೆಚ್ಚು ಸಾಧು ಸಂತರು  ಪಾಲ್ಗೊಳ್ಳಲಿದ್ದಾರೆ.

ಧರ್ಮಸ್ಥಳ ಬಳಿಯ ಕನ್ಯಾಡಿ ನಿತ್ಯಾನಂದ ನಗರದಲ್ಲಿರುವ ಶ್ರೀ ರಾಮ ಕ್ಷೇತ್ರದಲ್ಲಿ  ಎರಡು ನಡೆಯುವ ರಾಷ್ಟ್ರೀಯ ಧಾರ್ಮ ಸಂಸದ್ ನಲ್ಲಿ ದೇಶದ ನಾನಾ ಭಾಗಗಳಿಂದ 30 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ.
ಉತ್ತರ ಭಾರತ ದಿಂದ 2 ಸಾವಿರಕ್ಕೂ ಅಧಿಕ ಸಾಧು ಸಂತರು ಪಾಲ್ಗೊಳ್ಳಲಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ, ಕೇಂದ್ರ ಹಾಗೂ ರಾಜ್ಯದ ಸಚಿವರು ಧರ್ಮ ಸಂಸದ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸಾಧು ಸಂತರ  ಭೋಜನ ಉಪಹಾರಕ್ಕೆ  ಪ್ರತ್ಯೇಕ ಅನ್ನ ಛತ್ರ  ತೆರೆಯಲಾಗಿದೆ.108 ಮಂದಿ ಸ್ವಾಮೀಜಿಗಳು  ಹಾಗೂ 9 ಮಂದಿ ಮುಖ್ಯ ಅತಿಥಿಗಳು  ಕುಳಿತುಕೊಳ್ಳಲು  ವೇದಿಕೆ ಸಿದ್ಧವಾಗಿದೆ. ಉಜಿರೆ ಜನಾರ್ಧನ್ ದೇವಸ್ಥಾನದಿಂದ ಶೋಭಾ ಯಾತ್ರೆ ಆರಂಭಗೊಳ್ಳಲಿದ್ದು, 5 ರಥಗಳಲ್ಲಿ  ಪ್ರಮುಖ ಸಾಧು ಸಂತರನ್ನು ಕರೆ ತರಲಾಗುವುದು. ರಾತ್ರಿ 8  ಧರ್ಮ ಸಂಸದ್ ನಿರ್ಣಯಗಳನ್ನು  ಸಂತ ಶ್ರೇಷ್ಠರು ಕೈಗೊಳ್ಳಲಿದ್ದಾರೆ ಎಂದು ಕನ್ಯಾಡಿ ಕ್ಷೇತ್ರದ ಶ್ರೀ ಬ್ರಹ್ಮಾನಂದ  ಸರಸ್ವತಿ  ಸ್ವಾಮೀಜಿ ತಿಳಿಸಿದರು.

ಧರ್ಮ ಸಂಸದ್ ನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆ ಮಾಡಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.  ಸಾಧು ಸಂತರಿಂದ  ದಿವ್ಯ ಸಂದೇಶ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಾದ್ಯಂತ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ