Publish Date: Mon, 30 Dec 2019 (10:20 IST)
Updated Date: Mon, 30 Dec 2019 (10:22 IST)
ಬೆಂಗಳೂರು : ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಇಂದು ನಡೆಯಬೇಕಿದ್ದ ಚುನಾವಣೆಯನ್ನು ಮತ್ತೆ ಮುಂದೂಡಲಾಗಿದೆ.
ಬಿಬಿಎಂಪಿಯ 12 ಸ್ಥಾಯಿ ಸಮಿತಿಯ ಚುನಾವಣೆಗೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದು, ನಾಮಪತ್ರ ಸಲ್ಲಿಸಲು ಇಂದು ಬೆಳಿಗ್ಗೆ 8ರಿಂದ 9.30ರವರೆಗೆ ಅವಕಾಶವಿತ್ತು. ಆದರೆ ಸಮಯ ಮುಗಿದರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಮತ್ತೆ ಚುನಾವಣೆಯನ್ನು ಮುಂದೂಡಲಾಗಿದೆ.
ಪೇಜಾವರ ಶ್ರೀಗಳ ನಿಧನ ಹಿನ್ನಲೆಯಲ್ಲಿ ರಾಜ್ಯದಲ್ಲಿ ಶೋಕಾಚರಣೆ ಇರುವ ಕಾರಣ ಇದರ ಮಧ್ಯೆ ಎಲೆಕ್ಷನ್ ನಲ್ಲಿ ಭಾಗಿಯಾಗದಿರಲು 3 ಪಕ್ಷಗಳು ನಿರ್ಧಾರ ಮಾಡಿದೆ. ಆದ ಕಾರಣ ಕೋರಂ ಇಲ್ಲದ ಕಾರಣ ಅಧಿಕಾರಿಗಳು ಚುನಾವಣೆಯನ್ನು ಮುಂದೂಡಿದ್ದಾರೆ ಎನ್ನಲಾಗಿದೆ.