Select Your Language

Notifications

webdunia
webdunia
webdunia
webdunia

ತಳ್ಳೋಗಾಡಿಗಳನ್ನ ತೆರವು ಮಾಡಲು ಮುಂದಾದ ಬಿಬಿಎಂಪಿ

BBMP Chief Commissioner Tushar Girinath
bangalore , ಗುರುವಾರ, 9 ನವೆಂಬರ್ 2023 (16:00 IST)
ಬಿಬಿಎಂಪಿಯಿಂದ ಜಯನಗರದಲ್ಲಿ  ಮತ್ತೆ ತೆರವು ಕಾರ್ಯ ಮುಂದುವರೆದಿದೆ.ತಳ್ಳೋಗಾಡಿಗಳನ್ನ ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ.ಒಂದೇ ಜಾಗದಲ್ಲಿ ತಳ್ಳೋಗಾಡಿ ನಿಲ್ಲಿಸಿಕೊಳ್ಳೋದಕ್ಕೆ ಬಿಬಿಎಂಪಿ ಅವಕಾಶ ಇಲ್ಲ ಅಂದ ಬಿಬಿಎಂಪಿ ವಿರುದ್ದ ಜನರು ಅಕ್ರೋಶ ಹೊರಹಾಕಿದ್ದಾರೆ.
 
 ತಳ್ಳೋಗಾಡಿಯನ್ನ ಒಂದೇ ಕಡೆ ನಿಲ್ಲಿಸುವಂತೆ ಇಲ್ಲ ಎಂದು ಬಿಬಿಎಂಪಿ ಮಾರ್ಷಲ್ ಗಳಿಂದ ತೆರವಿಗೆ ಪ್ರಯತ್ನ ನಡೆಯುತ್ತಿದೆ.ಗಾಡಿಗಳನ್ನ ತೆಗೆಯುವಂತೆ  ಅಧಿಕಾರಿಗಳು ತಿಳಿಸಿದ್ದು,ತೆರವು ಮಾಡಿದ ಬಳಿಕ ಮತ್ತೆ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ.
 
ಇನ್ನೂ ಬೀದಿ ವ್ಯಾಪಾರಿಗಳ ಪರ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ನಿಂತಿದ್ದು ತುಷರ್ ಗಿರಿನಾಥ್ ವಿರುದ್ಧ ರೋಚಿಗೆದ್ದಿದ್ದಾರೆ.ಕಮಿಷನರ್ ಆಗಿ ಅವರಿಗೆ ಬರೀ ಬೀದಿವ್ಯಾಪರಿಗಳು.. ಪೌರ ಕಾರ್ಮಿಕರು ಮಾತ್ರ ಕಾಣಿಸುತ್ತರಾ? ಆತನಿಗೆ ಸರಿಯಾಗಿ ಕಾನೂನು ಗೊತ್ತಿಲ್ಲ.ಮೊದಲು ನಮಗೆ ಸರಿಯಾದ ವ್ಯವಸ್ಥೆ ಮಾಡಿ.ನಂತ್ರ ಜಾಗ ಖಾಲಿ ಮಾಡುತ್ತೇವೆ ಎಂದು ಅಧ್ಯಕ್ಷ ರಂಗಸ್ವಾಮಿ ಆಕ್ರೋಶಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಂದೂಕು ರಕ್ಷಣೆ ಮಾಡಿದ ಸಿ ಎ ಆರ್ ಟೀಂ