Select Your Language

Notifications

webdunia
webdunia
webdunia
webdunia

ಪ್ಲಾಸ್ಟಿಕ್ ಜಪ್ತಿ ಮಾಡಿ ದಂಢ ವಿಧಿಸುತ್ತಿರುವ ಬಿಬಿಎಂಪಿ

ಪ್ಲಾಸ್ಟಿಕ್ ಜಪ್ತಿ ಮಾಡಿ ದಂಢ ವಿಧಿಸುತ್ತಿರುವ ಬಿಬಿಎಂಪಿ
bangalore , ಬುಧವಾರ, 13 ಜುಲೈ 2022 (20:17 IST)
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನಗರದಾದ್ಯಂತ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಮಾರಾಟ ಮಳಿಗೆಗಳು, ಉತ್ಪಾದಿಸುತ್ತಿರುವ ಘಟಕಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ಅನಿರೀಕ್ಷಿತ ತಪಾಸಣೆ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ಜೊತೆಗೆ ದಂಡ ವಿಧಿಸಲಾಗುತ್ತಿದೆ. ಈ ಪೈಕಿ ಇಂದು 98 ಕಡೆ ಒಟ್ಟು 154.2 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ಜಪ್ತಿ ಮಾಡಿ 1,02,500 ರೂ. ದಂಡ ವಿಧಿಸಲಾಗಿದೆ. ಜುಲೈ 1 ರಿಂದ ಇಲ್ಲಿಯವರೆಗೆ 1,319 ಕಡೆ ಒಟ್ಟು 1,926.8 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ಜಪ್ತಿ ಮಾಡಿ 8,36,300 ರೂ. ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿಗೆ 10 ವರ್ಷ ಜೈಲು