ಅನಧಿಕೃತವಾಗಿ ಬಿಬಿಎಂಪಿ ಕಟ್ಟಡದಲ್ಲಿ ಕಾಲೇಜನ್ನ ಸಂಸ್ಥೆ ನಡೆಸಿದೆ.ಕಾನೂನು ಬಹಿರಂಗವಾಗಿ ಬಿಬಿಎಂಪಿ ಕಟ್ಟಡದಲ್ಲಿ ಖಾಸಗಿ ಕಾಲೇಜು ಪ್ರಾರಂಭ ಮಾಡಿದ್ದು,ಕಳೆದ ಎಂಟು ವರ್ಷಗಳಿಂದ ಅನಧಿಕೃತವಾಗಿ RGCL ಕಾಲೇಜ್ ನಡೆಸಿದೆ.ಕಳೆದ ಎಂಟು ವರ್ಷಗಳ ಹಿಂದೆ ಕಾಲೇಜು ನಡೆಸೋದಕ್ಕೆ ಬಿಬಿಎಂಪಿ ಪರ್ಮಿಷನ್ ಕೊಟ್ಟಿದೆ.ನಂತರ ಪರ್ಮಿಷನ್ ಬಿಬಿಎಂಪಿ ರದ್ದು ಮಾಡಿದೆ. ಪರ್ಮಿಷನ್ ರದ್ದು ಮಾಡಿದ್ರು ಅನಧಿಕೃತವಾಗಿ ಕಾಲೇಜು RGCL ನಡೆಸಿದೆ.
ರಾಜೀವ್ ಗಾಂಧಿ ಕಾಲೇಜ್ ಆಫ್ ಲಾ ಯಿಂದ ಅನಧಿಕೃತ ಬಿಬಿಎಂಪಿ ಶಾಲೆ ಕಾಲೇಜ್ ಗೆ ಈಗಾಗಲೇ ಬಿಬಿಎಂಪಿಯಿಂದ ಹಲವು ಬಾರಿ ಖಾಲಿ ಮಾಡುವಂತೆ ನೋಟಿಸ್ ಕೊಟ್ಟಿದ್ರು ಡೋಂಟ್ ಕೇರ್ ಅಂತಾ ಕಾಲೇಜು ಆಡಳಿತ ಮಂಡಳಿ ಹೇಳಿದೆ.ಕಾಲೇಜು ಆಡಳಿತ ಮಂಡಳಿ ವಿರುದ್ಧ ಬಿಬಿಎಂಒಇ ಕೋರ್ಟ್ ಕದ ತಟ್ಟಿದೆ,ಕೋರ್ಟ್ ನಲ್ಲೂ ಕೂಡ ಅನಧಿಕೃತ ಜಾಗ ಖಾಲಿ ಮಾಡುವಂತೆ ಸೂಚನೆ ನೀಡಿದೆ.ಆದ್ರೂ ಕೂಡ ಜಾಗ ಖಾಲಿ ಮಾಡ್ದೆ ಅನಧಿಕೃತವಾಗಿ ಕಾಲೇಜು RGCL ಆಡಳಿತ ಮಂಡಳಿ ನಡೆಸಿದೆ.ಸದ್ಯ ಈ ಬಗ್ಗೆ ಸ್ಥಳೀಯ ಶಾಸಕ ಆಶ್ವಥ್ ನಾರಾಯಣ್ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಯಲಾಗಿದ್ದು,ಅನಧಿಕೃತವಾಗಿ ಕಾಲೇಜು ನಡೆಸ್ತಿರೋ ರಾಜೀವ್ ಗಾಂಧಿ ಕಾಲೇಜನ್ನ ಕೂಡಲೇ ಎತ್ತಂಗಡಿ ಮಾಡಿ ಅಂತ ಶಾಸಕರಿಂದ ಆಯುಕ್ತರಿಗೆ ಮನವಿ ಮಾಡಿದೆ.ಹಾಗಾದ್ರೆ ಅನಧಿಕೃತವಾಗಿ ನಡೆಸ್ತಿರೋ ರಾಜೀವ್ ಗಾಂಧಿ ಕಾಲೇಜು ಖಾಲಿ ಅಗುತ್ತಾ ನೋಡಬೇಕಿದೆ.