Publish Date: Thu, 26 Oct 2023 (17:00 IST)
Updated Date: Thu, 26 Oct 2023 (17:06 IST)
ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿ ನಾಳೆ ಪೂರ್ವಭಾವಿ ಸಭೆ ನಡೆಯಲಿದೆ.ವಿವಿಧ ಬೇಡಿಕೆಗಾಗಿ ಆಗ್ರಹಿಸಿ ಪೂರ್ವ ಭಾವಿ ಸಭೆ ಬಿಬಿಎಂಪಿ ಅಧಿಕಾರಿ ಮತ್ತುನೌಕರರ ಸಂಘ ಕರೆದಿದೆ.ಸಭೆ ನಡೆಸಿ ಪ್ರತಿಭಟನಾ ಸ್ವರೂಪ ಮತ್ತು ದಿನಾಂಕ ಬಿಬಿಎಂಪಿ ನೌಕರರು ನಿಗದಿಪಡಿಸಿದ್ದಾರೆ.
ಆಯುಕ್ತರು ಮತ್ತು ಕಂದಾಯ ಅಧಿಕಾರಿಗಳ ವೃಂದಕ್ಕೆ ಮುಂಬಡ್ತಿನೀಡಿದ್ದು ಸ್ಥಳ ನಿಯೋಜನೆ ಮಾಡಿಲ್ಲ .ಇದರಿಂದ ಕೆಳ ಹಂತದ ನೌಕರರಿಗೆ ಮುಂಬಡ್ತಿಯಿಂದ ಸರ್ಕಾರ ವಂಚಿಸಿದಂತಾಗಿದೆ.ಪಾಲಿಕೆಯಲ್ಲಿ ಸರಿಯಾದ ಸಮಯಕ್ಕೆ ನೇಮಖಾತಿ ನಡೆಯುತ್ತಿಲ್ಲ.6414ಖಾಲಿ ಹುದ್ದೆಗಳಿದ್ದು ಇದರಿಂದ ನೌಕರರು ಒತ್ತಡದಲ್ಲಿ ಕಾರ್ಯನಿರ್ವಹಿಸುವಂತಾಗಿದೆ.ನೌಕರರಿಗೆ ಸರಿಯಾದ ವ್ಯವಸ್ಥೆ ಇಲ್ಲವೆಂದು ಸರ್ಕಾರದ ವಿರುಧ್ಧ ಬಿಬಿಎಂಪಿ ನೌಕರರು ಆರೋಪಮಾಡಿದ್ದಾರೆ.