Publish Date: Sat, 25 Aug 2018 (11:57 IST)
Updated Date: Sat, 25 Aug 2018 (11:58 IST)
ಬೆಂಗಳೂರು: ಕೊಡಗು, ಕೇರಳದಲ್ಲಿ ಪ್ರವಾಹ ನೋಡಿಯೇ ತಲ್ಲಣಗೊಂಡಿದ್ದ ಬೆಂಗಳೂರಿಗೆ ಆತಂಕ ಕೊಡುವ ಸುದ್ದಿಯನ್ನು ಬಿಬಿಎಂಪಿ ಹೊರ ಹಾಕಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಎಂದು ಬಿಬಿಎಂಪಿ ನಗರದಲ್ಲಿ ಹೈ ಅಲರ್ಟ್ ಘೋಷಿಸಿದೆ.
ನಗರದ ಸುಮಾರು 60 ಪ್ರದೇಶಗಳನ್ನು ಅಪಾಯಕಾರಿ ಪ್ರದೇಶವಾಗಿ ಬಿಬಿಎಂಪಿ ಘೋಷಿಸಿದೆ. ಈ ಪ್ರದೇಶಗಳ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಈ ಪ್ರದೇಶಗಳು ಮಳೆ ಬಂದರೆ ಅಪಾಯಕ್ಕೀಡಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಮತ್ತೊಂದು ಜಲಪ್ರಳಯಕ್ಕೆ ಸಿದ್ಧವಾಗಲು ಬೆಂಗಳೂರಿಗರಿಗೆ ಬಿಬಿಎಂಪಿ ಈಗಾಗಲೇ ಮುನ್ನಚ್ಚರಿಕೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.