ವಿಶ್ವ ವನ್ಯಜೀವಿ ದಿನದ ಪ್ರಯುಕ್ತ ಬಿಬಿಎಂಪಿ ಅರಣ್ಯ ವಿಭಾಗದ ವತಿಯಿಂದ 2 ವನ್ಯಜೀವಿ ಸಂರಕ್ಷಣಾ ವಾಹನಗಳಿಗೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಚಾಲನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅರಣ್ಯ ವಿಭಾಗದ ವತಿಯಿಂದ ಎಲ್ಲಾ 243 ವಾರ್ಡ್ ಗಳಲ್ಲಿ ವನ್ಯ ಪ್ರಾಣಿಗಳಾದ ಹಾವು, ಪಕ್ಷಿಗಳು, ಕೋತಿ ಸೇರಿದಂತೆ ಇನ್ನಿತರೆ ಪ್ರಾಣಿಗಳನ್ನು ಕಾಪಾಡುವ ಸಲುವಾಗಿ 9 ವನ್ಯಜೀವಿ ಸಂರಕ್ಷಕರಿದ್ದು, ಸಾರ್ವಜನಿಕರಿಂದ ದೂರು ಬಂದ ತಕ್ಷಣ ವನ್ಯ ಸಂರಕ್ಷರು ಸ್ಥಳಕ್ಕೆ ಭೇಟಿ ನೀಡಿ ವನ್ಯ ಜೀವಿಯನ್ನು ಸಂರಕ್ಷಿಸಿ ಅವುಗಳಿಗೆ ಪ್ರತಮ ಚಿಕಿತ್ಸೆ ನೀಡಿ ಹತ್ತಿರದ ಕಾಡಿಗೆ ಬಿಡಲಾಗುತ್ತದೆ.
ಬಿಬಿಎಂಪಿ ಅರಣ್ಯ ವಿಭಾಗದಲ್ಲಿ ವನ್ಯ ಜೀವಿ ಸಂರಕ್ಷಣೆಗಾಗಿ 1 ವಾಹನವು ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಪ್ರತ್ಯೇಕವಾಗಿ 2 ಹೊಸ ವನ್ಯಜೀವಿ ಸಂರಕ್ಷಣಾ ವಾಹನಗಳನ್ನು ಮೀಸಲಿಡಲಾಗಿದೆ. ಸದರಿ ವಾಹನದಲ್ಲಿ ಒಬ್ಬ ಚಾಲಕ, ಇಬ್ಬರು ವನ್ಯ ಜೀವಿ ಸಂರಕ್ಷರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ವಿವಿಧ ಪ್ರಾಣಿ/ಪಕ್ಷಿಗಳಿಗೆ ವಿವಿಧ ರೀತಿಯ ರಕ್ಷಣಾ ಸಲಕರಣೆಗಳು(ಚಿಕ್ಕ-ಚಿಕ್ಕ ಪ್ರಾಣಿಗಳನ್ನು ಹಿಡಿಯಲು ಸ್ಕೈ ಕೆನಲ್, ಹಕ್ಕಿಗಳನ್ನು ಹಿಡಿಯಲು ಬ್ಯಾಸ್ಕೆಟ್, ಹಾವುಗಳನ್ನು ಹಿಡಿಯಲು ಹುಕ್ ಮತ್ತು ಬ್ಯಾಗ್) ಲಭ್ಯವಿರಲಿವೆ.
ವನ್ಯ ಜೀವಿ ಸರಕ್ಷಣೆಗಾಗಿ ಸಾರ್ವಜನಿಕರು ಬಿಬಿಎಂಪಿಯ ಸಹಾಯವಾಣಿ ಸಂಖ್ಯೆ 08022225659, 08022221188 ಗೆ ಕರೆ ಮಾಡಿ ದೂರು ನೀಡಿದ ತಕ್ಷಣ ವನ್ಯ ಜೀವಿ ಸಂರಕ್ಷಕರು ವನ್ಯಜೀವಿ ಸಂರಕ್ಷಣಾ ವಾಹನದ ಮೂಲಕ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ವನ್ಯ ಜೀವಿಗಳ ಸಂಕ್ಷಣೆ ಮಾಡಿ ಹತ್ತಿರದ ಕಾಡಿಗೆ ಬಿಡಲಿದ್ದಾರೆ.
ಈ ವೇಳೆ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಜಯರಾಮ್ ರಾಯಪುರ, ಪ್ರೀತಿ ಗೆಹ್ಲೋಟ್, ವಿಶೇಷ ಭೂಸ್ವಾಧೀನ ಅಧಿಕಾರಿಯಾದ ಪ್ರತೀಕ್ ಬಾಯಲ್, ಉಪ ಅರಣ್ಯ ಸಂರಕ್ಷಣಾ ಅಧಿಕಾರಿಯಾದ ಸರೀನಾ ಸಿಕ್ಕಲಿಗರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.