Select Your Language

Notifications

webdunia
webdunia
webdunia
webdunia

ಸಿಲಿಂಡರ್ ಬ್ಲಾಸ್ಟ್ ಆಗಿ ಒಂದೇ ಕುಟುಂಬದ 13 ಜನರಿಗೆ ಗಾಯ

ಸಿಲಿಂಡರ್ ಬ್ಲಾಸ್ಟ್ ಆಗಿ ಒಂದೇ ಕುಟುಂಬದ 13 ಜನರಿಗೆ ಗಾಯ
bangalore , ಶುಕ್ರವಾರ, 3 ಮಾರ್ಚ್ 2023 (19:43 IST)
ಅಲ್ಲಿ ಇಡೀ ಕುಟುಂಬವೊಂದು  ರಾತ್ರಿಯೀಡಿ ಅಡುಗೆ ಮಾಡಿ ಬೆಳಗ್ಗೆ ಊಟಕ್ಕೆ ಕರೆದಿದ್ದ ಅಥಿತಿ ಗಳಿಗೆ ಬಡಿಸೊದಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಇನ್ನೇನು ಅಡುಗೆ ಕೆಲಸವೆಲ್ಲ ಮುಗಿತಲ್ಲ ಎಂದು ಸ್ವಲ್ಪ ರಿಲೆಕ್ಸ್ ಮಾಡೊಣ ಅಂತ ಮಲಗಿದ್ದಾರೆ. ಆದ್ರೆ ಮಗುವಿಗೆ ಹಾಲು ಕಾಯಿಸೊಣ ಅಂತ ಕಿಚನ್ ನಲ್ಲಿ ಲೈಟರ್ ಆನ್  ಮಾಡಿದ್ದಾರೆ ಅಷ್ಟೇ ಮುಂದೆ ಆಗಿದ್ದು ಮಾತ್ರ ಘನ ಘೋರ ದುರ್ಘಟನೆ.ಎಲ್ಲೆಂದರೆಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು, ತುಂಡಾಗಿ ಬಿದ್ದಿರುವ ಕಿಟಕಿ, ಗ್ಲಾಸ್ ಗಳು, ಹಾಗೋ, ಹೀಗೋ ಬೀಳೊ ಸ್ಥಿತಿಯಲ್ಲಿರುವ ಬಾಲ್ಕನಿಯ ಗ್ರಿಲ್ ಇವೆಲ್ಲಾ ದೃಶ್ಯಗಳು ಕಂಡು‌ ಬಂದಿದ್ದು  ರಾಜಾಜಿನಗರದ ಮರಿಯಪ್ಪನ ಪಾಳ್ಯದ 5 ನೇ ಕ್ರಾಸ್ ನಲ್ಲಿ.ಹೌದು ಮನೇಯ ಮಾಲೀಕಮರಿಯಪ್ಪನ ಪಾಳ್ಯದಲ್ಲಿ ಮಟ್ಟನ್ ಅಂಗಡಿಯಿಟ್ಟುಕೊಂಡು ಜೀವನ‌ ಮಾಡುತ್ತಿದ್ದಾರೆ. ಇಂದು ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಸಂಬಂದಿಕರನ್ನ ಕರೆಸಿ ರಾತ್ರಿಯಲ್ಲ ಅಡಿಗೆ ಮಾಡಿಸಿದ್ದಾರೆ.ಎಲ್ಲ ಅಂದುಕೊಂಡಂತೆ ಆಗಿದ್ದರೆ ಇವತ್ತು ಬೆಳಗ್ಗೆ ಶುಭ ಕಾರ್ಯ ನಡೆಯಬೇಕಿತ್ತು ಆದ್ರೆ ವಿಧಿಯ ಅಟವೇ ಬೇರೆ ಆಗಿತ್ತು . ಬೆಳಗ್ಗೆ ಸುಮಾರು 6.10 ರ‌ ಸಮಯದಲ್ಲಿ  ಹಾಲು ಕಾಯಿಸಲು ಹೋದಾಗ ಗ್ಯಾಸ್ ಲೀಕೇಜ್ ಆಗಿರೋದು ಗೊತ್ತೇ ಆಗಿಲ್ಲ .ಲೈಟರ್ ಆನ್ ಮಾಡಿದ್ದಾರಷ್ಟೆ ಬೆಂಕಿಯ ಕಿಡಿಗೆ ಸಿಲಿಂಡರ್ ಬ್ಲಾಸ್ಟ್ ಆಗಿ ಮನೆಯಲ್ಲಿ ಮಲಗಿದ್ದ ಹದಿಮೂರು ಜನರು ‌ಗಾಯಗೊಂಡಿದ್ದಾರೆ ಅದರಲ್ಲಿ ಆರು ಜನ ಮಹಿಳೆಯರು , ಮೂವರು ಮಕ್ಕಳು ಇದ್ದಾರೆ.

ಸ್ಟೋಟದ ಶಬ್ದಕೇಳಿದ ಸ್ಥಳೀಯರು  ಗಾಯಾಳುಗಳಾದ ಬಂದು‌ ಅಂಬ್ಯುಲೇನ್ಸ್ಗೆ ಕರೆ ಮಾಡಿದ್ರೆ ಸರಿಯಾದ ಸ್ಪಂದನೆ ಮಾಡಿಲ್ಲ ಎಂದು  ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಲ್ಲಿ ಅಜ್ಮಲ್(, ನಜೀಮ್(42) ರಿಯಾನ್(14) ಅದ್ನಾನ್(12), ಫಯಾಜ್ (10), ಮೆಹರುನ್ನಿಸಾ (11), ಅಜಾನ್ (5) , ಜೈನಬ್ (8) ಅಮೀರ್ ಜಾನ್ (52), ಶಬನಾಜ್ (18), ನಸೀಮಾ, (40), ಸಲ್ಮಾ (33), ರೇಷ್ಮಾ ಬಾನು (48) ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ ಇದರಲ್ಲಿ‌ನಾಲ್ವರ ಸ್ಥಿತಿಗೆ ಗಂಭೀರ ವಾಗಿದೆ .ಇನ್ನೂ ಘಟನೆ ನಡೆದು ಒಂದು‌ ಗಂಟೆಯಾದರು ಅಂಬ್ಯುಲೆನ್ಸ್ ಬಾರದೆ ಗಾಯಾಳುಗಳು ಪರದಾಡಿದ್ರು ಕರೆ ಮಾಡಿದ್ರೆ ಸರಿಯಾಗಿ ಸ್ಪಂಧನೆ ಮಾಡದೆ ಬೇಜವಾಬ್ದಾರಿಯಿಂದ ಮಾತಾಡಿದ್ರು ಎಂದು ಸ್ಥಳೀಯ ರು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಸಂಬಂದ ರಾಜಾಜಿನಗರ ಪೋಲಿಸ್ ಠಾಣೆಯಲ್ಲಿ ಪ್ರಕರಷ ದಾಖಲಾಗಿದ್ದು .ತನಿಖೆ ಮುಂದುವರಿಸಿದ್ದಾರೆ. ಏನೇ ಆಗಲಿ ಗ್ಯಾಸ್ ಬಳಸದ ಮನೆಗಳಿಲ್ಲ ಆದ್ರೆ ಬಳಸುವಾಗ ಪ್ರತಿಯೊಬ್ಬರು ಸುರಕ್ಷತಾ ಕ್ರಮಗಳನ್ನ ಅನುಸರಿಸಿ ಅನ್ನೋದು ನಮ್ಮ ಮನವಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕನ ಪುತ್ರನ ಮನೆಯಲ್ಲಿ ಕಂತೆ ಕಂತೆ ಹಣ..!