Select Your Language

Notifications

webdunia
webdunia
webdunia
webdunia

ಕೊರೋನಾ ಕಾಲದಲ್ಲಿ ಬಿಜೆಪಿಯವರು ದುಡ್ಡು ಹೊಡೆದಿದ್ರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Basanagowda Patil Yatnal

Krishnaveni K

ಬೆಂಗಳೂರು , ಶನಿವಾರ, 9 ನವೆಂಬರ್ 2024 (18:22 IST)
ಬೆಂಗಳೂರು: ಕೊರೋನಾ ಕಾಲದಲ್ಲಿ ಬಿಜೆಪಿಯವರು ದುಡ್ಡು ಹೊಡೆದಿದ್ರು ಆದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯಗೆ ಧಮ್ ಇಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.

ಬಿಎಸ್ ಯಡಿಯೂರಪ್ಪ ಮತ್ತು ಬಿ ಶ್ರೀರಾಮುಲು ವಿರುದ್ಧ ಕೊವಿಡ್ ಹಗರಣ ಮಾಡಿದ ಆರೋಪ ಕೇಳಿ ಬಂದಿದೆ. ಸದಾ ಬಿಎಸ್ ವೈ ಮತ್ತು ಪುತ್ರರ ವಿರುದ್ಧ ಕಿಡಿ ಕಾರುತ್ತಲೇ ಇರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಕೊವಿಡ್ ಕೇಸ್ ವಿಚಾರದಲ್ಲಿ ಹೆಸರು ಕೇಳಿಬಂದಿರುವ ಬೆನ್ನಲ್ಲೇ ಟೀಕಾ ಪ್ರಹಾರ ನಡೆಸಿದ್ದಾರೆ.

ಸಿದ್ದರಾಮಯ್ಯ ಹೊಂದಾಣಿಕೆ ರಾಜಕೀಯ ಮಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲ್ಲ. ನಾಚಿಕೆಯಾಗಬೇಕು ನಿಮಗೆ. ನಾನೇ ಕೊರೋನಾ ಟೈಂನಲ್ಲಿ ಆಸ್ಪತ್ರೆಗೆ ದಾಖಲಾದಾಗ 5 ಲಕ್ಷ ರೂ. ಬಿಲ್ ಆಗಿತ್ತು. ನನ್ನ ಪಾಡೇ ಹೀಗಿದ್ದರೆ ಜನಸಾಮಾನ್ಯರದ್ದು ಹೇಗಾಗಿರಬೇಡ. 25 ರೂ. ಒಂದು ಮಾಸ್ಕ್ ನಲ್ಲೇ ದುಡ್ಡು ಹೊಡೀತೀರಿ ಎಂದರೆ ಅಂತಹವರನ್ನು ಬಿಡಬೇಡಿ, ಜೈಲಿಗೆ ಹಾಕಿ ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

ಆದರೆ ಸಿದ್ದರಾಮಯ್ಯಗೆ ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವ ಧಮ್ ಇಲ್ಲ. ನನ್ನ  ವಿರುದ್ಧ, ಪ್ರತಾಪ್ ಸಿಂಹ ವಿರುದ್ಧ ಕೇಸ್ ಹಾಕ್ತಾರೆ. ಹೊಂದಾಣಿಕೆ ರಾಜಕೀಯ ಮಾಡುವವರ ವಿರುದ್ಧ ಒಂದು ಹೇಳಿಕೆಯನ್ನೂ ನೀಡಲ್ಲ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

25 ಎಕರೆ ದಾನ ಮಾಡಲು ಡಿಕೆ ಶಿವಕುಮಾರ್ ರಾಜವಂಶದವರಾ: ಎಚ್ ಡಿ ಕುಮಾರಸ್ವಾಮಿ