ಮೋಮೋಸ್ ಮಾರಿ ತಿಂಗಳಿಗೆ 31 ಲಕ್ಷ ಸಂಪಾದನೆ: ಬೆಂಗಳೂರಿನ ಬೀದಿ ಬದಿ ವ್ಯಾಪಾರಿ ಅಷ್ಟು ಫೇಮಸ್ ಅಂತೆ

Krishnaveni K
ಸೋಮವಾರ, 17 ನವೆಂಬರ್ 2025 (11:56 IST)
Photo Credit: Instagram
ಬೆಂಗಳೂರು: ಈ ಹಿಂದೆ ಪ್ರಧಾನಿ ಮೋದಿ ಪಕೋಡಾ ಮಾರಿ ಬದುಕುವ ಬಗ್ಗೆ ಹೇಳಿದಾಗ ಎಲ್ಲರೂ ಟೀಕಿಸಿದ್ದರು. ಆದರೆ ಈ ರೀತಿ ಬೀದಿ ಬದಿ ವ್ಯಾಪಾರ ಮಾಡಿದರೂ ಅದೃಷ್ಟವಿದ್ದರೆ ಶ್ರೀಮಂತರಾಗಬಹುದು ಎಂಬುದಕ್ಕೆ ಈ ಮೋಮೋಸ್ ವ್ಯಾಪಾರಿ ಮತ್ತೊಂದು ಉದಾಹರಣೆ.

ವ್ಲಾಗರ್, ಕ್ರಿಯೇಟರ್ ಕ್ಯಾಸೀ ಪೆರೇರಿಯಾ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಬೆಂಗಳೂರಿನ ಮೋಮೋಸ್ ಸೆಂಟರ್ ಒಂದರ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ. ಕೆಕೆ ಮೋಮೋಸ್ ಎನ್ನುವ ಸ್ಟಾಲ್ ಗೆ ಕ್ಆಸೀ ಪೆರೇರಿಯಾ ಭೇಟಿ ನೀಡುತ್ತಾರೆ.

ಇಲ್ಲಿ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವಿವಿಧ ರೀತಿಯ ಮೋಮೋಸ್ ಗಳನ್ನು ಮಾರಲಾಗುತ್ತದಂತೆ. ಇಲ್ಲಿ ಅವರು ನಾಲ್ಕು ಗಂಟೆಯಲ್ಲಿ ಪ್ರತೀ ಪ್ಲೇಟ್ ಗೆ 110 ರೂ.ಗಳಂತೆ 950 ಪ್ಲೇಟ್ ಮೋಮೋಸ್ ಗಳನ್ನು ಮಾರಿದ್ದಾರೆ. ಅಂದರೆ ಒಂದು ದಿನಕ್ಕೆ 1,04,500 ರೂ.! ಈ ರೀತಿ ಪ್ರತೀ ದಿನವೂ ಮಾರಾಟವಾದರೆ ಆತನ ತಿಂಗಳ ಆದಾಯ 31.35 ಲಕ್ಷ ರೂ.!

ಕ್ಯಾಸೀ ಪೆರೆರಿಯಾ ಅವರ ಈ ವಿಡಿಯೋಗೆ ಸಾಕಷ್ಟು ಜನ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇಷ್ಟು ಸುಲಭವಾಗಿ ಹಣ ಗಳಿಸಬಹುದಿತ್ತು ಎಂದರೆ ನಾವು ಮೋಮೋಸ್ ಮಾರಿಯೇ ಜೀವನ ಮಾಡುತ್ತಿದ್ದೆವು. ಇಷ್ಟೆಲ್ಲಾ ಪದವಿ ಪಡೆಯುವ ಅಗತ್ಯವಿತ್ತಾ ಎಂದು ಕೆಲವರು ಜೋಕ್ ಮಾಡಿದ್ದಾರೆ. ಮತ್ತೆ ಕೆಲವರು ಇದು ನಿಜವೇ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by Cassy Pereira (@cassiusclydepereira)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಬಿಹಾರದಲ್ಲಿ ಎನ್ ಡಿಎ ಗೆಲುವಿನಿಂದ ಜನರಿಗೆ ಖುಷಿಯಾಗಿಲ್ಲ, ಮರು ಚುನಾವಣೆ ಮಾಡಿ: ರಾಬರ್ಟ್ ವಾದ್ರಾ

ಆರ್ ಎಸ್ಎಸ್ ಬಿಟ್ರೆ ಬೇರೆ ವಿಷ್ಯಗಳೇ ಇಲ್ವಾ: ಪ್ರಿಯಾಂಕ್ ಖರ್ಗೆ ನೆಟ್ಟಿಗರ ಪ್ರಶ್ನೆ

Karnataka Weather: ರಾಜ್ಯದಲ್ಲಿ ಈ ವಾರದ ಹವಾಮಾನದಲ್ಲಿ ಏನಿದೆ ಬದಲಾವಣೆ

ಮುಂದಿನ ಸುದ್ದಿ
Show comments