Select Your Language

Notifications

webdunia
webdunia
webdunia
webdunia

ಇವಳೆಂಥಾ ಸೊಸೆ, ಅತ್ತೆ ಮಾವನಿಗೆ ಮಕ್ಕಳ ಜೊತೆ ಸೇರಿ ಥಳಿಸಿದ ವಿಡಿಯೋ ಇಲ್ಲಿದೆ

crime

Krishnaveni K

ಬೆಂಗಳೂರು , ಶುಕ್ರವಾರ, 14 ಮಾರ್ಚ್ 2025 (11:40 IST)
ಬೆಂಗಳೂರು: ವೃದ್ಧ, ಅನಾರೋಗ್ಯ ಪೀಡಿತ ಅತ್ತೆ-ಮಾವನಿಗೆ ಮಕ್ಕಳ ಜೊತೆ ಸೇರಿಕೊಂಡು ಸೊಸೆ ಎನಿಸಿಕೊಂಡವಳು ಮನಬಂದಂತೆ ಥಳಿಸಿದ ವಿಡಿಯೋ ಈಗ ವೈರಲ್ ಆಗಿದೆ. ಇದೀಗ ಸೊಸೆ ವಿರುದ್ಧ ದೂರು ದಾಖಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಡಾ ಪ್ರಿಯದರ್ಶಿನಿ ಎಂಬಾಕೆ ತನ್ನ ಅತ್ತೆ-ಮಾವನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾಳೆ. ಇದಕ್ಕೆ ಆಕೆಯ ಇಬ್ಬರು ಮಕ್ಕಳೂ ಸಾಥ್ ನೀಡಿದ್ದಾರೆ. ಇದೀಗ ಸೊಸೆ ವಿರುದ್ಧ ಮಾವ ನರಸಿಂಹಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ಸೊಸೆ ಕಿರುಕುಳಕ್ಕೆ ಬೇಸತ್ತ ಅತ್ತೆ-ಮಾವ ಕಳೆದ ಕೆಲವು ವರ್ಷಗಳಿಂದಲೂ ಪ್ರತ್ಯೇಕವಾಗಿಯೇ ವಾಸವಾಗಿದ್ದಾರೆ. ಅತ್ತೆ-ಮಾವನ ಭೇಟಿಗೆ ಆಕೆಗೆ ಯಾವುದೇ ಹಕ್ಕಿಲ್ಲ ಎಂದು ಕೋರ್ಟ್ ಕೂಡಾ ತೀರ್ಪು ನೀಡಿತ್ತು. ಆದರೆ ಮಾರ್ಚ್ 10 ರಂದು ರಾತ್ರಿ ಮಕ್ಕಳೊಂದಿಗೆ ಮನೆಗೆ ಬಂದ ಪ್ರಿಯದರ್ಶಿನಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ದೂರಿನಲ್ಲಿ ಮಾವ ನರಸಿಂಹಯ್ಯ ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇನ್ನು ಮುಂದೆ ನಿಮ್ಮ ಮನೆ ಕಸಕ್ಕೂ ಬೀಳಲಿದೆ ಸುಂಕ