Daily Horoscope
✕

ಬೆಂಗಳೂರು ಏರ್ ಶೋ ಇಫೆಕ್ಟ್: ಈ ರಸ್ತೆಯಲ್ಲಿ 4 ಕಿಮೀ ಟ್ರಾಫಿಕ್ ಜಾಮ್ (video)

Krishnaveni K
ಮಂಗಳವಾರ, 11 ಫೆಬ್ರವರಿ 2025 (11:46 IST)
Photo Credit: X
ಬೆಂಗಳೂರು: ಏಷ್ಯಾದ ಅತೀ ದೊಡ್ಡ ಏರ್ ಶೋ ಯಲಹಂಕದ ವಾಯು ನೆಲೆಯಲ್ಲಿ ನಡೆಯುತ್ತಿದ್ದು ಇದರ ಪರಿಣಾಮ ಈ ರಸ್ತೆಯಲ್ಲಿ ಸಂಚರಿಸುವವರು ಗಮನಿಸಿ.

ಬೆಂಗಳೂರು ಏರ್ ಶೋಗೆ ಸಾಕಷ್ಟು ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಏರ್ ಶೋನಲ್ಲಿ ಪ್ರದರ್ಶನಕ್ಕಿಡಲಾಗಿರುವ ವಿಮಾನಗಳ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದಾರೆ. ಇದರ ನಡುವೆ ಇಂದು, ನಾಳೆ ಗಣ್ಯರು ಬರುತ್ತಿದ್ದಾರೆ.

ಈ ನಡುವೆ ಏರ್ ಶೋಗೆ ಸಾಕಷ್ಟು ಜನ ಬರುತ್ತಿರುವುದರಿಂದ ಯಲಹಂಕಕ್ಕೆ ಬರುವ ರಸ್ತೆಗಳೆಲ್ಲವೂ ವಾಹನಗಳಿಂದ ತುಂಬಿ ಹೋಗಿದೆ. ಪರಿಣಾಮ ಸುಮಾರು 4 ಕಿ.ಮೀ.ಗಳಷ್ಟು ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿ.ಮೀ.ಗಟ್ಟಲೇ ವಾಹನಗಳು ರಸ್ತೆಯಲ್ಲೇ ನಿಂತಿವೆ.

ಕೇವಲ ಏರ್ ಶೋ ಮಾತ್ರವಲ್ಲ, ಏರ್ ಪೋರ್ಟ್, ಕಚೇರಿ ಕೆಲಸಗಳಿಗಾಗಿ ಇದೇ ಮಾರ್ಗದಲ್ಲಿ ಓಡಾಡುವವರಿಗೆ ಈಗ ಎಂದಿನಂತೆ ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಯಲಹಂಕ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು ಪ್ರಯಾಣಿಕರು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ರಸ್ತೆಗಳಲ್ಲಿ ಸಂಚರಿಸುವುದು ಉತ್ತಮ. ಫೆಬ್ರವರಿ 13,14 ರಂದು ಸಾರ್ವನಿಕರಿಗೂ ಏರ್ ಶೋ ವೀಕ್ಷಣೆಗೆ ಅವಕಾಶವಿದ್ದು ಆ ದಿನಗಳಲ್ಲಿ ಮತ್ತಷ್ಟು ಸಂಚಾರ ದಟ್ಟಣೆಯಿರುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೀಗೂ ಇರ್ತಾರಾ ಗುರೂ… ವರನಿಗೆ 1 ಕೋಟಿ ರೂ ನೋಟಿನ ಹಾರ: ದುಂದುವೆಚ್ಚದ ಪರಮಾವಧಿ ಅಂದ್ರೆ ಇದೇ Video

ಶೂ, ಸಾಕ್ಸ್‌ಗೆ ಮನವಿ ಸಲ್ಲಿಸಲು ಬಂದವರ ಮೇಲೆ ಸಚಿವ ಮಧು ಬಂಗಾರಪ್ಪ ದರ್ಪ: ಮದ ತಲೆಗೆ ಹತ್ತಿದೆ ಎಂದ ಬಿಜೆಪಿ Video

ಚಾಲಾಕಿ ಕಳ್ಳ… ಮದುವೆ ಮನೆಯಲ್ಲಿ ಅತಿಥಿಯಂತೆ ಬಂದವ 22 ಲಕ್ಷ ದೋಚಿದ ರೋಚಕ ಕ್ಷಣ ಸಿಸಿಟಿವಿಯಲ್ಲಿ ಸೆರೆ Video

ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು: ಈಗ ಚುನಾವಣಾ ಆಯುಕ್ತರ ರಾಜೀನಾಮೆ ಕೇಳಲ್ವಾ ಎಂದು ರಾಹುಲ್ ಗಾಂಧಿಗೆ ನೆಟ್ಟಿಗರ ಟಾಂಗ್ Video

ಅಣ್ಣನ ಮನವಿ ಬೇಡ, ಅಧಿಕೃತ ಆದೇಶ ಬೇಕು: ಆಶಾ ಕಾರ್ಯಕರ್ತೆಯರ ಬೆಂಬಲಕ್ಕೆ ನಿಂತ ಸುಮಲತಾ, ರಮ್ಯಾ, ಕಾರುಣ್ಯ ರಾಮ್

ಮುಂದಿನ ಸುದ್ದಿ
Show comments