Select Your Language

Notifications

webdunia
webdunia
webdunia
webdunia

Bakrid ಹಿನ್ನೆಲೆ: ಬೆಂಗಳೂರು ರಸ್ತೆ ಬದಿ ಕುರಿ ಬೆಲೆ ಕೇಳಿದ್ರೇ ಶಾಕ್ ಆಗ್ತೀರಿ, Video

ಬೆಂಗಳೂರು ಬಕ್ರೀದ್ 2025

Sampriya

ಬೆಂಗಳೂರು , ಶುಕ್ರವಾರ, 6 ಜೂನ್ 2025 (19:43 IST)
Photo Courtesy X
ಬೆಂಗಳೂರು: ಬಕ್ರೀದ್ ತ್ಯಾಗ ಬಲಿದಾನದ ಸಂಕೇತ. ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು ಆಚರಿಸುತ್ತಾರೆ. ಇಸ್ಲಾಂನಲ್ಲಿ ಎರಡನೆಯದು ಮತ್ತು ದೊಡ್ಡದಾದ ರಜಾದಿನಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. 

ದೇಶದಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. 

ಇನ್ನೂ ಬಕ್ರೀದ್‌ನಲ್ಲಿ ಮೇಕೆ, ಕುರಿಗಳಿಗೆ ಭಾರೀ ಡಿಮ್ಯಾಂಡ್ ಇರುತ್ತೆ. ಈ ಹಿನ್ನೆಲೆ ನಗರದಲ್ಲಿ ಮೇಕೆ, ಕುರಿ ಮಾರಾಟ ಜೋರಾಗಿಯೇ ನಡೆಯುತ್ತದೆ. ಬೆಂಗಳೂರಿನ ಮುನಿರೆಡ್ಡಿ ಪಾಳ್ಯದಲ್ಲಿ ಭಾರೀ ಸಂಖ್ಯೆಯಲ್ಲಿ ಕುರಿ, ಮೇಕೆಗಳನ್ನು ಮಾರಾಟಮಾಡಲಾಗುತ್ತಿದೆ. 


ಸಾಕಿದ ನೂರಾರು ಕುರಿ, ಮೇಕೆಗಳನ್ನು ಮಾರಾಟ ಮಾಡಲು ಕೃಷಿಕರು ಬೆಂಗಳೂರಿಗೆ ಬಂದಿದ್ದಾರೆ. 10-12 ದಿನದ ಹಿಂದೆಯೇ ನಗರಕ್ಕೆ ಬಂದು ವ್ಯಾಪಾರವನ್ನು ಮಾಡುತ್ತಿದ್ದಾರೆ. 

ಕುರಿ, ಮೇಕೆ ಖರೀದಿ ಮುಸ್ಲಿಂ ವ್ಯಕ್ತಿಯ ಘನತೆಯ ಪ್ರಶ್ನೆಯಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬರ ಮನೆಯಲ್ಲೂ ಖರೀದಿ ಮಾಡುತ್ತಾರೆ. ಇದರಿಂದ ಈ ಸಂದರ್ಭದಲ್ಲಿ ಕುರಿ, ಮೇಕೆಯ ಬೆಲೆಯೂ ಹೆಚ್ಚಾಗುತ್ತದೆ. ಇದೀಗ ಬಕ್ರೀದ್ ಹಬ್ಬದ ಹಿನ್ನೆಲೆ ಒಂದು ಕುರಿ ಅಥವಾ ಮೇಕೆಯ ಬೆಲೆ 10 ಸಾವಿರದಿಂದ 1.50 ಲಕ್ಷದವರೆಗೂ ಇರುತ್ತದೆ. 

ಅದರ ಬಣ್ಣ, ಹಲ್ಲು, ಕೋಡು, ಭುಜವನ್ನು ನೋಡಿ ಕುರಿ, ಮೇಕೆಯ ಕ್ವಾಲಿಟಿಯನ್ನು ಚೆಕ್ ಮಾಡಿ, ಖರೀದಿಸುತ್ತಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

Operation Sindoor: ವಿವಾದಾತ್ಮಕ ಪೋಸ್ಟ್ ಬೆನ್ನಲ್ಲೇ ಗುಜರಾತ್‌ ಕಾಂಗ್ರೆಸ್‌ ನಾಯಕ ರಾಜೇಶ್ ಸೋನಿ ಅರೆಸ್ಟ್‌