Select Your Language

Notifications

webdunia
webdunia
webdunia
Friday, 4 April 2025
webdunia

BJPಯಿಂದ ಬಾಡೂಟ; ಅಧಿಕಾರಿಗಳ ದಾಳಿ

Badoota from BJP
ಕೊಪ್ಪಳ , ಮಂಗಳವಾರ, 4 ಏಪ್ರಿಲ್ 2023 (18:40 IST)
ಕೊಪ್ಪಳದ ಕಾರಟಗಿಯಲ್ಲಿ ಹಾಲಿ ಶಾಸಕ ಬಸವರಾಜ ದಡೇಸೂಗೂರು ಆಪ್ತ, ಕಾಶಿವಿಶ್ವನಾಥ ಬಿಚ್ಚಾಲಿ ಬಾಡೂಟ ಆಯೋಜನೆ ಮಾಡಿದ್ದು, ಮಾಹಿತಿ ಮೇರೆಗೆ ಚುಣಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚುನಾವಣಾ ಅಧಿಕಾರಿಗಳನ್ನು ಕಂಡು ಬಾಡೂಟ ಸವಿಯಲು ಬಂದಿದ್ದ ಮಂದಿಯೆಲ್ಲಾ ಕಾಲ್ಕಿತ್ತಿದ್ದಾರೆ.. ದೋತರದಟ್ಟಿ ಹೆಸರಲ್ಲಿ ಮತದಾರರನ್ನು ಸೆಳೆಯಲು ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.. ಕಾಶಿವಿಶ್ವನಾಥ ಪುತ್ರ ಬಿ. ವಿನಯಕುಮಾರ ದೋತರದಟ್ಟಿ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಬಾಡೂಟ ಹಾಕಿಸಲಾಗಿದೆ. 500 ಜನರಿಗೆ ಊಟದ ವ್ಯವಸ್ಥೆ ಮಾಡುವುದಾಗಿ ಶಾಸಕನ ಅಪ್ತ ಕಾಶಿವಿಶ್ವನಾಥ ಬಿಚ್ಚಾಲಿ ಅನುಮತಿ ಪಡೆದಿದ್ರು. ಆದರೆ ಕ್ಷೇತ್ರದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಭಾವಚಿತ್ರ, ವಿಡಿಯೊ ತೆಗೆಯುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಬಾಡೂಟದ ಸ್ಥಳದಿಂದ ಕಾಲ್ಕಿತ್ತಿದ್ದಾರೆ.. ಬಾಡೂಟದ ವ್ಯವಸ್ಥೆ ಮಾಡಿರುವ ಎಲ್ಲರ ವಿರುದ್ಧ ದೂರು ದಾಖಲಿಸಲು ಚುನಾವಣಾ ಅಧಿಕಾರಿಗಳು ಮುಂದಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ತಿರುಗೇಟು