Select Your Language

Notifications

webdunia
webdunia
webdunia
webdunia

ನಾಳೆ ಸೂರ್ಯ ಗ್ರಹಣದ ಹಿನ್ನಲೆ; ರಾಜ್ಯದ ಹಲವು ದೇಗುಲಗಳು ನಾಳೆ ಬಂದ್

ನಾಳೆ ಸೂರ್ಯ ಗ್ರಹಣದ ಹಿನ್ನಲೆ; ರಾಜ್ಯದ ಹಲವು ದೇಗುಲಗಳು ನಾಳೆ ಬಂದ್
ಬೆಂಗಳೂರು , ಶನಿವಾರ, 20 ಜೂನ್ 2020 (09:30 IST)
Normal 0 false false false EN-US X-NONE X-NONE

ಬೆಂಗಳೂರು : ನಾಳೆ ಸೂರ್ಯ ಗ್ರಹಣದ ಹಿನ್ನಲೆಯಲ್ಲಿ ರಾಜ್ಯದ ಹಲವು ದೇಗುಲಗಳು ನಾಳೆ ಬಂದ್ ಆಗಲಿವೆ.
 


ಧರ್ಮಸ್ಥಳದಲ್ಲಿ ದೇವರ ದರ್ಶನ ಇರಲ್ಲ. ನಾಳೆ ಬೆಳಿಗ್ಗೆ 9ರಿಂದ 4ರವರೆಗೆ ದರ್ಶನ ಬಂದ್ ಮಾಡಲಾಗಿದೆ. ಬಳಿಕ ಸಂಜೆ 4ರಿಂದ 9ರವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಕುಕ್ಕೆಯಲ್ಲೂ ನಾಳೆ ಬೆಳಿಗ್ಗೆ 10 ರಿಂದ 3.30ರವರೆಗೆ ದರ್ಶನ ಇಲ್ಲ. ಮಧ್ಯಾಹ್ನ 3.30ರಿಂದ 5.30ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ಆದರೆ ಗ್ರಹಣ ಹಿನ್ನಲೆ ವಿಶೇಷ ಪೂಜೆ, ಹೋಮಗಳಿಲ್ಲ ಎನ್ನಲಾಗಿದೆ.

ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದರ್ಶನ ಕೂಡ ಬಂದ್ ಮಾಡಲಾಗಿದೆ. ನಾಳೆ ಬೆಳಿಗ್ಗೆ 9ರಿಂದ 4ರವರೆಗೆ ದರ್ಶನ ಇರಲ್ಲ ಎನ್ನಲಾಗಿದೆ . ಇಂದು ಮತ್ತು ನಾಳೆ ಚಾಮುಂಡಿ ದೇವಿ ದರ್ಶನ ಇಲ್ಲ. ಕೋವಿಡ್ ಮತ್ತು ಗ್ರಹಣ ಹಿನ್ನಲೆ ದೇವಿ ದರ್ಶನ ಇರಲ್ಲ. ಬಾದಾಮಿಯಲ್ಲೂ ಬನಶಂಕರಿ ದೇಗುಲ ನಾಳೆ ಬೆಳಿಗ್ಗೆ 10ರಿಂದ  1.30ರವರೆಗೆ ದೇಗುಲ ಬಂದ್ ಮಾಡಲಾಗುವುದು, ಗ್ರಹಣದ ಬಳಿಕ ದೇವಿ ದರ್ಶನಕ್ಕೆ ಅವಕಾಶ ನೀಡುವುದಾಗಿ ತಿಳಿದುಬಂದಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 8 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ