Select Your Language

Notifications

webdunia
webdunia
webdunia
webdunia

ಕೇರಳ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ; ಕೆಎಸ್ ಆರ್ ಟಿಸಿ ಬಸ್ ಸೇವೆ ಸ್ಥಗಿತ

ಕೇರಳ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ; ಕೆಎಸ್ ಆರ್ ಟಿಸಿ ಬಸ್ ಸೇವೆ ಸ್ಥಗಿತ
ಬೆಂಗಳೂರು , ಗುರುವಾರ, 3 ಜನವರಿ 2019 (11:33 IST)
ಬೆಂಗಳೂರು : ಇಂದು ಕೇರಳ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಕರ್ನಾಟಕದಿಂದ ಕೇರಳಕ್ಕೆ ಸಂಚರಿಸುವ ಎಲ್ಲಾ ಕೆಎಸ್ ಆರ್ ಟಿಸಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.


ಶಬರಿಮಲೆ ದೇಗುಲಕ್ಕೆ ಬುಧವಾರ  ಇಬ್ಬರು ಮಹಿಳೆಯರು ಪ್ರವೇಶಿಸಿದ್ದರು. ಇದನ್ನು ಖಂಡಿಸಿ ಸ್ಥಳೀಯ ಸಂಘಟನೆಗಳು ಇಂದು ಕೇರಳ ಬಂದ್ ಗೆ ಕರೆ ನೀಡಿದ್ದು, ಕೇರಳದಲ್ಲಿ ಬಾರೀ ಪ್ರತಿಭಟನೆಗಳು ನಡೆಯುತ್ತಿವೆ.


ಈ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಕೇರಳಕ್ಕೆ ಹೋಗಬೇಕಿದ್ದ 3 ಬಸ್ ಗಳು, ಮಂಗಳೂರಿನಿಂದ ಹೇಗಬೇಕಿದ್ದ ಸುಮಾರು 40 ಬಸ್ ಗಳು ಹಾಗೂ ಇತರೆ ಭಾಗಗಳಿಂದ ಕೇರಳಕ್ಕೆ ತೆರಳಬೇಕಿದ್ದ ಸುಮಾರು 20 ಬಸ್ ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್ ಆರ್ ಟಿಸಿ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ಸರ್ಕಾರ ಹಿಂದೂಗಳ ಮೇಲೆ ಹಾಡಹಗಲೇ ಅತ್ಯಾಚಾರ ನಡೆಸಿದೆ- ಸಚಿವ ಅನಂತ್ ಕುಮಾರ್ ಹೆಗಡೆ ಟೀಕೆ