ಹೊಸ ವರ್ಷದ ಸೆಲೆಬ್ರೆಷನ್ ನಿಂದ ಅಬಕಾರಿ ಇಲಾಖೆಯ ಬೊಕ್ಕಸಕ್ಕೆ ಬಂದ ಹಣವೆಷ್ಟು ಗೊತ್ತಾ?

ಬುಧವಾರ, 2 ಜನವರಿ 2019 (11:45 IST)
ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆಯಿಂದ ಅಬಕಾರಿ ಇಲಾಖೆಯ ಬೊಕ್ಕಸಕ್ಕೆ ಕೋಟಿ ಕೋಟಿ ಆದಾಯ ಬಂದಿದೆ. ಆ ಮೂಲಕ ಅಬಕಾರಿ ಇಲಾಖೆಯ ಆದಾಯ ಈ ವರ್ಷ ಶೇ.12 ರಷ್ಟು ಏರಿಕೆಯಾಗಿದೆ.


ಹೊಸ ವರ್ಷದ ಸಂಭ್ರಮದಲ್ಲಿ ರಾಜ್ಯದಲ್ಲಿ ಒಟ್ಟು 3.83 ಲಕ್ಷ ಬಾಕ್ಸ್ ಮಾರಾಟವಾಗಿದ್ದು, ಒಟ್ಟು ಬರೋಬ್ಬರಿ 80 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೇ 81 ಸಾವಿರ ಮದ್ಯದ ಬಾಕ್ಸ್ ಗಳು ಮಾರಾಟವಾಗಿದ್ದು, 20 ಕೋಟಿ ರೂ. ಆದಾಯ ಗಳಿಕೆಯಾಗಿದೆ ಎನ್ನಲಾಗಿದೆ.


ಕಳೆದ ವರ್ಷ ರಾಜ್ಯದಲ್ಲಿ 60-65 ಕೋಟಿ ಆದಾಯ ಸಂಗ್ರಹವಾಗಿತ್ತು. ಆದರೆ ಈ ಬಾರಿ ಈ ಮೊತ್ತ 80 ಕೋಟಿ ರೂ.ಗೆ ಏರಿಕೆಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಹಿಳೆಯರ ಪ್ರವೇಶದ ಹಿನ್ನಲೆ; ಇಂದು ಶಬರಿಮಲೆ ದೇಗುಲ ಬಂದ್