ಮನೆಯಲ್ಲಿ ಸಕರಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಲು ಮಣ್ಣಿನಿಂದ ಮಾಡಿದ ಈ ವಸ್ತುವನ್ನು ಈಶಾನ್ಯ ದಿಕ್ಕಿನಲ್ಲಿಡಿ

ಗುರುವಾರ, 3 ಜನವರಿ 2019 (06:54 IST)
ಬೆಂಗಳೂರು : ಪ್ರಕೃತಿ ದತ್ತವಾದ ಮಣ್ಣನ್ನು ಹಿಂದೂ ಧರ್ಮದಲ್ಲಿ ಭೂತಾಯಿಗೆ ಹೋಲಿಸಲಾಗಿದೆ. ವಾಸ್ತುಶಾಸ್ತ್ರ ಜ್ಯೋತಿಷ್ಯಶಾಸ್ತ್ರ ಹಾಗೂ ಪುರಾಣದಲ್ಲಿಯೂ ಸಹ ಮಣ್ಣಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಮನೆಯಲ್ಲಿ ಮಣ್ಣಿನಿಂದ ಮಾಡಿದ ಕೆಲವು ವಸ್ತುಗಳನ್ನು ಇಡುವುದರಿಂದ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತದೆ. ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.


ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ಬರುವುದಿಲ್ಲ. ಹಬ್ಬಹರಿದಿನಗಳಲ್ಲಿ ಮಣ್ಣಿನ ದೀಪದಿಂದ ದೀಪಾರಾಧಾನೆ ಮಾಡಿದರೆ ಒಳ್ಳೆಯದು. ಪ್ರತಿನಿತ್ಯ ತುಳಸಿ ದೇವಿಗೆ ಪೂಜೆ ಮಾಡುವಾಗ ಮಣ್ಣಿನ ದೀಪದಿಂದ ದೀಪವನ್ನು ಹಚ್ಚಿದರೆ ಸಂಸಾರದಲ್ಲಿ ಕಲಹಗಳು ಬರುವುದಿಲ್ಲ.


ಮನೆಯಲ್ಲಿ ಸಕರಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಲು ಮಣ್ಣಿನಿಂದ ಮಾಡಿದ ಪಕ್ಷಿಯ ಮೂರ್ತಿಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡುವುದು ಉತ್ತಮ. ಹಾಗೇ ಮಣ್ಣಿನಿಂದ ಮಾಡಿದ ಪಾತ್ರೆಯಲ್ಲಿ ಟೀ, ಮಜ್ಜಿಗೆ, ಪಾನೀಯ, ನೀರನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಸಹ ಹೆಚ್ಚಿಸಿಕೊಳ್ಳಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದಿನಕ್ಕೊಂದು ರಾಶಿ: ಕರ್ಕಟಕ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?